ADVERTISEMENT

ವಾಲಿಬಾಲ್‌: ಕಲಬುರಗಿ ವಿಭಾಗ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 4:25 IST
Last Updated 3 ಅಕ್ಟೋಬರ್ 2022, 4:25 IST
ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾಕೂಟ ವಾಲಿಬಾಲ್‌ನಲ್ಲಿ ಚಾಂಪಿಯನ್‌ ಆದ ಕಲಬುರಗಿ ವಿಭಾಗ ತಂಡ
ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾಕೂಟ ವಾಲಿಬಾಲ್‌ನಲ್ಲಿ ಚಾಂಪಿಯನ್‌ ಆದ ಕಲಬುರಗಿ ವಿಭಾಗ ತಂಡ   

ಕೊಪ್ಪಳ: ಎಲ್ಲಾ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಕಲಬುರಗಿ ವಿಭಾಗದ ಬಾಲಕಿಯರ ವಾಲಿಬಾಲ್‌ ತಂಡವು ನಾಡಹಬ್ಬ ದಸರಾ ಅಂಗವಾಗಿ ಮೈಸೂರಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾನುವಾರ ಮೊದಲ ಬಾರಿಗೆ ಚಾಂಪಿಯನ್‌ ಆಗಿದೆ. ಇದರಲ್ಲಿ ಆರು ಜನ ಆಟಗಾರ್ತಿಯರು ಕೊಪ್ಪಳದವರು ಎನ್ನುವುದು ವಿಶೇಷ.

ಕಲಬುರಗಿ ವಿಭಾಗದ ತಂಡ ತನ್ನ ಮೊದಲ ಪಂದ್ಯದಲ್ಲಿ 3–0 ಸೆಟ್‌ಗಳಿಂದ ಬೆಂಗಳೂರು ನಗರದ ಮೇಲೂ, ನಂತರ 3–2ರಲ್ಲಿ ಮೈಸೂರು ವಿಭಾಗದ ವಿರುದ್ಧ, ಬೆಳಗಾವಿ ವಿರುದ್ಧ 3–0ರಲ್ಲಿ ಮತ್ತು ಬೆಂಗಳೂರು ಗ್ರಾಮಾಂತರ ವಿಭಾಗದ ಎದುರು 3–2ರಲ್ಲಿ ಜಯಭೇರಿ ಮೊಳಗಿಸಿ ತನ್ನ ಚೊಚ್ಚಲ ಪ್ರಶಸ್ತಿ ಕನಸು ನನಸು ಮಾಡಿಕೊಂಡಿತು. ಕಲಬುರಗಿ ವಿಭಾಗ ಹಿಂದಿನ ವರ್ಷದ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಸ್ಥಾನ ಪಡೆದಿತ್ತು.

ಕಲಬುರಗಿ ವಿಭಾಗದ ತಂಡದಲ್ಲಿ ಹುಲಿಗೆಮ್ಮ, ಗಾಯತ್ರಿ, ಸರಸ್ವತಿ, ರೇವತಿ, ಗಂಗಮ್ಮ, ಸಂಗೀತಾ, ಸುರೇಖಾ, ಕಾವ್ಯಾ, ಪೂಜಾ, ಪ್ರೀತಿ ಹಾಗೂ ನಿರುಪಮಾ ಇದ್ದರು. ಸುರೇಶ್ ಹಾಗೂ ಕಮಲ್‌ಸಿಂಗ್‌ ಕೋಚ್‌ ಆಗಿದ್ದರು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸೂಪರಿಡೆಂಟೆಂಟ್‌ ನಾಗರಾಜ ತೆರಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.