ತಾವರಗೇರಾ: ಸಮೀಪದ ಹಾಗಲದಾಳ ಗ್ರಾಮದಿಂದ ನಾರಿನಾಳ ಸಂಪರ್ಕ ರಸ್ತೆಯ ಡಾಂಬರು ಹಾಳಾಗಿದ್ದು, ಗ್ರಾಮದಲ್ಲಿ ಮುಖ್ಯವಾದ ಈ ರಸ್ತೆಯಲ್ಲಿ ಕಲುಷಿತ ನೀರು ಸಂಗ್ರಹವಾಗಿ ಸೊಳ್ಳೆಗಳ ಹಾವಳಿಯಿಂದ ಗ್ರಾಮಸ್ಥರಲ್ಲಿ ರೋಗ ಹರಡುವ ಭೀತಿ ಹೆಚ್ಚಾಗಿದೆ ಎಂದು ಗ್ರಾಮದ ಬಸನಗೌಡ ಪಾಟೀಲ, ಮುತ್ತುರಾಜ, ರಾಮಣ್ಣ ತಿಳಿಸಿದ್ದಾರೆ.
ಮಳೆಯಿಂದ ಈ ರಸ್ತೆ ಹದೆಗೆಟ್ಟು ವಾಹನ ಸವಾರರು , ರೈತರ ಎತ್ತಿನ ಬಂಡಿ ಓಡಾಟಕ್ಕೆ ಹರಸಾಹಸ ಪಡಬೇಕಿದೆ. ಡಾಂಬರ್ ಕಿತ್ತಿರುವ ಕಾರಣ ತಗ್ಗು ಬಿದ್ದು ಕಲುಷಿತ ನೀರು ನಿಂತಿದೆ. ಮಕ್ಕಳು, ವೃದ್ಧರು ಅನಾರೋಗ್ಯಕ್ಕೆ ತುತ್ತಾಗುವ ಭಯದಲ್ಲಿ ದಿನ ಕಳೆಯುತ್ತಿದ್ದು ಜುಮಲಾಪೂರ ಗ್ರಾ.ಪಂ ಆಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ಥಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.