ADVERTISEMENT

ಗಂಗಾವತಿ: ಮಠದಲ್ಲೇ ಮೊಟ್ಟೆ, ಬಾಳೆಹಣ್ಣು ತಿನ್ನುತ್ತೇವೆ; ವಿದ್ಯಾರ್ಥಿನಿ ಆಕ್ರೋಶ

ಪ್ರತಿಭಟನೆ ವೇಳೆ ವಿದ್ಯಾರ್ಥಿನಿ ಅಂಜಲಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 5:54 IST
Last Updated 13 ಡಿಸೆಂಬರ್ 2021, 5:54 IST
ಅಂಜಲಿ
ಅಂಜಲಿ   

ಗಂಗಾವತಿ (ಕೊಪ್ಪಳ ಜಿಲ್ಲೆ): ನಗರದಲ್ಲಿ ಶನಿವಾರ ಭಾರತ ವಿದ್ಯಾರ್ಥಿ ಒಕ್ಕೂಟದ (ಎಸ್‌ಎಫ್‌ಐ) ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಎಂಎನ್ಎಂ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಅಂಜಲಿ ಮೊಟ್ಟೆ ವಿರೋಧಿಸುವ ಮಠಾಧೀಶರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದಳು.

‘ಶಾಲೆಗಳಲ್ಲಿ ಮೊಟ್ಟೆ ವಿತರಿಸುವುದನ್ನು ಮಠಾಧೀಶರು ವಿರೋಧಿಸುವುದು ಮುಂದುವರಿಸಿದಲ್ಲಿ, ಮಕ್ಕಳೆಲ್ಲ ಸೇರಿ ಮಠದಲ್ಲೇ ಮೊಟ್ಟೆ ಮತ್ತು ಬಾಳೆಹಣ್ಣು ಸೇವಿಸುತ್ತೇವೆ’ ಎಂದು ಆಕೆ ಹೇಳಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

‘ನಾವು ಮೊಟ್ಟೆ ತಿಂದ್ರೇನೆ ಬದುಕುತ್ತೇವೆ. ಇಲ್ಲದಿದ್ದರೆ, ಸತ್ತು ಹೋಗುತ್ತೇವೆ. ನಾವು ಮೊಟ್ಟೆ ಸೇವಿಸುವುದು ಬೇಕಾ ಇಲ್ಲವೇ, ಮೊಟ್ಟೆ ವಿತರಣೆ ಮಾಡದಿರುವುದು ಬೇಕಾ. ನಮ್ಮ ಬೆನ್ನಿಗೆ ಯಾರೂ ಇಲ್ಲ ಅಂತ ತಿಳಿದಿರಾ ಹೇಗೆ. ಶಾಲೆ, ಪೋಷಕರು, ಶಿಕ್ಷಕರು, ಎಸ್ಎಫ್ಐ ಸಂಘಟನೆಯವರು ಇದ್ದಾರೆ. ಮೊಟ್ಟೆ ವಿತರಿಸಲು ಮಠಾಧೀಶರು ವಿರೋಧ ವ್ಯಕ್ತಪಡಿಸಿದರೆ, ಮಕ್ಕಳೆಲ್ಲ ಸೇರಿ ಮಠದಲ್ಲೇ ಮೊಟ್ಟೆ, ಬಾಳೆ
ಹಣ್ಣು ಸೇವಿಸುತ್ತೇವೆ’ ಎಂದು ಅಂಜಲಿಹೇಳಿದಳು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.