ಕಾರಟಗಿ: ‘ಅಭಿವೃದ್ಧಿ ವಿಷಯದಲ್ಲಿ ವಿರೋಧ ಪಕ್ಷದವರಾದರೂ ಸಚಿವರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಒಟ್ಟಾರೆ ಅಭಿವೃದ್ಧಿಯಾಗಿ, ಜನರಿಗೆ ಅನುಕೂಲವಾದರೆ ಸಾಕು. ಪ್ರಜಾಸೌಧ ಎಲ್ಲೇ ನಿರ್ಮಿಸಿರಿ, ನಮ್ಮದೇನೂ ವಿರೋಧವಿಲ್ಲ. ಜನರು, ಸಂಘಟನೆಗಳ ಸಭೆ ಕರೆದು ಚರ್ಚಿಸಿ, ಸಲಹೆ ಪಡೆದು ಬಳಿಕ ಜನರ ಭಾವನೆಗೆ ತಕ್ಕಂತೆ ಏನೇ ತೀರ್ಮಾನ ತಗೆದುಕೊಳ್ಳಿರಿ ಅದಕ್ಕೆ ನಮ್ಮದೂ ಸಹಮತ ಇರುತ್ತದೆ’ ಎಂದು ಬಿಜೆಪಿ ಮುಖಂಡ ನಾಗರಾಜ್ ಬಿಲ್ಗಾರ್ ಹೇಳಿದರು.
ಬುಧವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಜೂರಟಗಿ ಬಳಿಯ 12 ಎಕರೆ ಸರ್ಕಾರಿ ಜಮೀನಿನಲ್ಲಿ ಯಾವ ಕಟ್ಟಡಗಳಾಗುತ್ತವೆ ಎಂಬುದನ್ನು ಸಭೆ ಕರೆದು ಸಚಿವರು ಬಹಿರಂಗಪಡಿಸಬೇಕು. ಅದನ್ನೆಲ್ಲಾ ಬಿಟ್ಟು ಬೇರೆ, ಬೇರೆ ಕಡೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸುವುದು ಸಮಂಜಸವಲ್ಲ. ಜನರ ಅಭಿಪ್ರಾಯಯದಂತೆ ಅಭಿವೃದ್ದಿ ಕಾರ್ಯಕ್ಕೆ ಮುಂದಾದರೆ ಸಚಿವರಿಗೂ ಶೋಭೆ, ನಮ್ಮದೂ ಸಂಪೂರ್ಣ ಬೆಂಬಲ ಇರುತ್ತದೆ. ಅವರು ಕರೆದ ಸಭೆಯಲ್ಲೂ ಪಾಲ್ಗೊಳ್ಳುತ್ತೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಸಚಿವರು ಮುಂದೆ ಸಾಗಬೇಕು’ ಎಂದರು.
ಜಿ.ಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಮುಖಂಡ ಚಂದ್ರಶೇಖರ ಮುಸಾಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.