ADVERTISEMENT

ಆರತಿ ಬೆಳಗಿ ಮಕ್ಕಳಿಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 14:06 IST
Last Updated 5 ಜೂನ್ 2025, 14:06 IST
ಗಂಗಾವತಿ ನಗರದ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಚಿಣ್ಣರರನ್ನು ಸ್ವಾಗತಿಸಲಾಯಿತು
ಗಂಗಾವತಿ ನಗರದ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಚಿಣ್ಣರರನ್ನು ಸ್ವಾಗತಿಸಲಾಯಿತು   

ಗಂಗಾವತಿ: ನಗರದ ಲಿಟಲ್ ಹಾರ್ಟ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಣ್ಣರಿಗೆ ಆರತಿ ಬೆಳಗಿ, ಕುಂಕಮ ಹಚ್ಚಿ, ಅಕ್ಷತೆಯ ತಾಟಿನಲ್ಲಿ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಗುರುವಾರ ಶಾಲೆಗೆ ಸ್ವಾಗತಿಸಲಾಯಿತು.

ಸೆಲ್ಫಿ ತೆಗೆಸಿ ಶಾಲೆಯ ಕೊಠಡಿಗಳಿಗೆ ಆಹ್ವಾನಿಸಲಾಯಿತು.

ಇದಕ್ಕೂ ಮುನ್ನ ಶಾಲೆಯ ಪಾಲಕರು ಗಣೇಶನಿಗೆ, ಸರಸ್ವತಿಗೆ ಪೂಜೆ ಸಲ್ಲಿಸಿದರು.ಶಾಲೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ, ಮುಖ್ಯಶಿಕ್ಷಕಿ ಪ್ರಿಯಾಕುಮಾರಿ ರಿಬ್ಬನ್ ಕತ್ತರಿಸಿ ಮಕ್ಕಳನ್ನು ತರಗತಿಗಳಿಗೆ ಬರಮಾಡಿಕೊಂಡರು. ಶಿಕ್ಷಕಿಯರಾದ ಲಕ್ಷ್ಮಿ, ಗೀತಾ, ರಚನಾ, ಶಾರದಾ, ಖಾಜಾ ಬಾನಿ, ದೀಪಾ, ನಾಗರತ್ನ, ಶಿಲ್ಪಾ ಸಂಡೂರ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.