ಅಳವಂಡಿ: ‘ಸರ್ವ ಸದಸ್ಯರ, ಗ್ರಾಮಸ್ಥರ ಜನಪ್ರತಿನಿಧಿಗಳ ಸಹಕಾರದಲ್ಲಿ ರಸ್ತೆ ಅಗಲಿಕರಣ ಕಾರ್ಯ ನಡೆಯುತ್ತಿದ್ದು. ಇದು ಗ್ರಾಮದ ಅಭಿವೃದ್ದಿಗೆ ಸಹಕಾರಿಯಾಗಲಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕ್ರಮ್ಮ ಜೋಗಿನ ಹೇಳಿದರು.
ಗ್ರಾಮದ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಪಿಡಿಓ ಕೊಟ್ರಪ್ಪ ಅಂಗಡಿ ಕಳೆದ ಸಭೆಯ ಗೊತ್ತುವಳಿಯನ್ನು ಮಂಡಿಸಿದರು. ಸದಸ್ಯರು ನಿಯಮಾನುಸಾರ ಕ್ರಮ ಕೈಕೊಳ್ಳುವಂತೆ ಸೂಚಿಸಿದರು. ನಂತರ ಮಾಸಿಕ ಪ್ರಗತಿ ವರದಿ, ಜಮಾ, ಖರ್ಚು, ಸಾರ್ವಜನಿಕರಿಂದ ಬಂದ ಅರ್ಜಿಗಳ ಪರಿಶೀಲನೆ, ಅಧಿಕಾರಿಗಳಿಂದ ಬಂದ ಪತ್ರಗಳನ್ನು ಮಂಡಿಸಲಾಯಿತು.
ನಂತರ ಸಭೆ ಒಮ್ಮತದ ನಿರ್ಣಯ ಅಂಗೀಕರಿಸಿತು. ಕಂಪ್ಲಿ ಗ್ರಾಮದಲ್ಲಿ ಗ್ರಂಥಾಲಯ ಸ್ಥಾಪನೆಗೆ ಒಪ್ಪಿಗೆ, 25–26ನೇ ಸಾಲಿನ ಕ್ರಿಯಾ ಯೋಜನೆ, 15ನೇ ಹಣಕಾಸು ಯೋಜನೆಯ ಪ್ರಗತಿ ಬಗ್ಗೆ ಚರ್ಚೆ, ಈ ಯೋಜನೆಯಡಿ ಬಾಕಿ ಉಳಿದ ಕಾಮಗಾರಿ ತುರ್ತಾಗಿ ಮುಗಿಸಲು ಚರ್ಚೆ, ಗ್ರಾಮದಲ್ಲಿ ಸ್ವಚ್ಚತೆ, ಬೀದಿದೀಪ ಇತರ ವಿಷಯಗಳ ಕುರಿತು ಚರ್ಚೆ ನಡೆದು ಸಭೆ ಒಪ್ಪಿಗೆ ಸೂಚಿಸಿತು. ನಂತರ ಅಧ್ಯಕ್ಷರ ಅಪ್ಪಣೆಯ ಮೇರೆಗೆ ಬಂದ ಇತರ ವಿಷಯಗಳ ಕುರಿತು ಚರ್ಚಿಸಲಾಯಿತು.
ಈ ವೇಳೆ ಉಪಾಧ್ಯಕ್ಷೆ ಶಾರಮ್ಮ ಇಳಿಗೇರ, ಸದಸ್ಯರಾದ ಗುರುಬಸವರಾಜ ಹಳ್ಳಿಕೇರಿ, ಅನ್ವರ ಗಡಾದ, ರೇಣುಕಪ್ಪ, ಹನುಮಂತ ಮೋರನಾಳ, ನಾಗರಾಜ, ಹನುಮಂತ ಮೂಲಿಮನಿ, ಮಂಜುನಾಥ, ವಿಶ್ವನಾಥ, ಹನುಮವ್ವ, ಗವಿಸಿದ್ದಪ್ಪ, ರೇಣುಕಾ, ಭಾರತಿ, ಸುವರ್ಣಾ, ಗೌಸಬೀ, ಶಶಿಕಲಾ, ಮೀನಾಕ್ಷಿ ಸಿಬ್ಬಂದಿಗಳಾದ ಶಿವಮೂರ್ತಿ, ದೇವೆಂದ್ರರಡ್ಡಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.