ತಾವರಗೇರಾ: ಸಮೀಪದ ಜೆ ರಾಂಪೂರ ಗ್ರಾಮದಲ್ಲಿ ಗುರುವಾರ ಸಂಜೆ ಸುರಿದ ಮಳೆಯಲ್ಲಿ ಸಿಡಿಲು ಬಡಿದು ಗ್ರಾಮದ ರತ್ನಮ್ಮ ದೊಡ್ಡಪ್ಪ ಓತಗೇರಿ (44) ಎಂಬುವವರು ಮೃತಪಟ್ಟಿದ್ದಾರೆ.
ಜಮೀನಿನಲ್ಲಿ ಕೃಷಿ ಚಟುವಟಿಕೆಗೆ ಹೋಗಿದ್ದ ಸಂದರ್ಭದಲ್ಲಿ ಮಳೆ ಆರಂಭವಾಗಿದ್ದು, ಈ ವೇಳೆ ಸಿಡಿಲು ಬಡಿದಿದೆ. ವಿಷಯ ತಿಳಿದು ಸ್ಥಳಕ್ಕೆ ಕುಷ್ಟಗಿ ತಹಶೀಲ್ದಾರ್ ರವಿ ಎಸ್ ಅಂಗಡಿ ಭೇಟಿ ನೀಡಿ ಪರಿಶೀಲಿಸಿ, ಮೃತ ಕುಟುಂಬಕ್ಕೆ ₹ 5 ಲಕ್ಷ ಚೆಕ್ ವಿತರಿಸಿದರು. ಕಂದಾಯ ನಿರೀಕ್ಷಕ ಶರಣಯ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಮತ್ತೊಂದು ಪ್ರಕರಣದಲ್ಲಿ ಶಿವಮೊಗ್ಗ ತೀರ್ಥಹಳ್ಳಿ ತಾಲ್ಲೂಕಿನ ಗುಜುಗೊಳ್ಳಿಯಲ್ಲಿ ಸಿಡಿಲು ಬಡಿದು ಕೃಷಿ ಕಾರ್ಮಿಕ ನಾಗೇಂದ್ರ ಎಮ್.ಎಸ್. (45) ಮೃತಪಟ್ಟರು.
ಗದಗ ಜಿಲ್ಲೆ ನರಗುಂದದ ಗುಡ್ಡದಕೇರಿ ಓಣಿಯ ಕುರಿಗಾಹಿ ಯಲ್ಲಪ್ಪ ಹನುಮಂತ ಕಿಲಿಕೈ (17) ಬೈರನಹಟ್ಟಿ ಗ್ರಾಮದ ಬಳಿ ಕುರಿ ಕಾಯುವಾಗ, ಸಿಡಿಲು ಬಡಿದು ಮೃತಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.