ಯಲಬುರ್ಗಾ: ‘ದೈಹಿಕ ಮತ್ತು ಮಾನಸಿಕ ಸದೃಡತೆಗೆ ಪೂರಕವಾಗಿರುವ ಕ್ರೀಡಾ ಚಟುವಟಿಕೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ತಾಳಕೇರಿ ವಲಯ ಸಂಪನ್ಮೂಲ ವ್ಯಕ್ತಿ ದೊಡ್ಡನಗೌಡ ಪಾಟೀಲ ಹೇಳಿದರು.
ತಾಲ್ಲೂಕಿನ ಯಾಪಲದಿನ್ನಿ ಗ್ರಾಮದಲ್ಲಿ ಹಿರೇವಂಕಲಕುಂಟಾ ಮತ್ತು ತಾಳಕೇರಿ ವಲಯಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಸವರಾಜ ತಳವಾರ ಮಾತನಾಡಿ, ‘ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಸೋಲು ಅಥವಾ ಗೆಲುವು ಮುಖ್ಯವಲ್ಲ. ಮಕ್ಕಳು ಉತ್ತಮ ಆಡವಾಡಬೇಕು. ಶಿಕ್ಷಕರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಪ್ರಮಾಣಿಕವಾಗಿ ನಡೆಯಬೇಕು’ ಎಂದು ಸಲಹೆ ನೀಡಿದರು.
ಕ್ರೀಡಾ ಜ್ಯೋತಿಯನ್ನ ಬಸವರಾಜ ಮುಳಗುಂದ ಸ್ವೀಕರಿಸಿದರು. ದೈಹಿಕ ಶಿಕ್ಷಣಾಧಿಕಾರಿ ವೀರಭದ್ರಪ್ಪ ಅಂಗಡಿ ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ವಿರೂಪಾಕ್ಷಪ್ಪ ಬನ್ನಿಗೋಳ ಪ್ರತಿಜ್ಞಾವಿಧಿ ಬೋಧಿಸಿದರು.
ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿದ್ಲಿಂಗಪ್ಪ ಶ್ಯಾಗೋಟಿ, ಸತೀಶ ಹಟ್ಟಿ, ಎಸ್ಡಿಎಂಸಿಯ ಯಮನೂರಪ್ಪ ತಳವಾರ, ಮಾರುತಿ ಮಾಟ್ರಂಗಿ, ನಿವೃತ್ತ ಪ್ರಾಚಾರ್ಯ ಚಂದ್ರಕಾಂತಯ್ಯ ಕಲ್ಯಾಣಮಠ, ಪಿಡಿಒ ಹನುಮಂತಪ್ಪ ರೇಣಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶರಣಪ್ಪ ಹರಿಜನ, ಮುಖಂಡರಾದ ಕನಕರಾಯ ವಾಲ್ಮೀಕಿ, ಬಸಯ್ಯ ಹಿರೇಮಠ, ಶಿಕ್ಷಕರಾದ ಶೇಖರಗೌಡ ಪೊಲೀಸ್ ಪಾಟೀಲ, ಭೀಮನಗೌಡ ಮಾಲಿಪಾಟೀಲ, ಮುಖ್ಯಶಿಕ್ಷಕ ವೀರನಗೌಡ ಪೊಲೀಸ್ ಪಾಟೀಲ, ಬಸವರಾಜ ಉಳ್ಳಾಗಡ್ಡಿ, ಸಂಪನ್ಮೂಲ ವ್ಯಕ್ತಿ ಮಾನಪ್ಪ ಪತ್ತಾರ, ಆರೋಗ್ಯ ಇಲಾಖೆಯ ಜಯಶ್ರೀ ಗೌಡ್ರ, ಕಿರಿಯ ಆರೋಗ್ಯ ಸಹಾಯಕ ಮನೀಷ್.ಸೇರಿ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.