ಯಲಬುರ್ಗಾ: ‘ವಾಸಿಸುವ ಪ್ರದೇಶದಲ್ಲಿ ಸೊಳ್ಳೆಗಳ ಹುಟ್ಟಿಕೊಳ್ಳದಂತೆ ಸ್ವಚ್ಛವಾಗಿಟ್ಟುಕೊಳ್ಳುವುದು ಹಾಗೂ ಶುದ್ಧ ನೀರು ಸೇವಿಸುವ ಮೂಲಕ ಡಿಂಗಿ ಜ್ವರದಿಂದ ಪಾರಾಗಬಹುದಾಗಿದೆ’ ಎಂದು ಬಂಡಿ ಗ್ರಾಮದ ಆರೋಗ್ಯ ಸಮನ್ವಯಾಧಿಕಾರಿ ಡಾ. ಅನಂತ ಹೇಳಿದರು.
ತಾಲ್ಲೂಕಿನ ಬಂಡಿ ಗ್ರಾಮದ ಪುಟ್ಟರಾಜ ಜ್ಞಾನವಿಕಾಸ ಕೇಂದ್ರದಲ್ಲಿ ಆಯೋಜಿಸಿದ್ದ ಸೃಜನಶೀಲ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಿರ್ಮಲಾ ಕೊತಬಾಳ, ‘ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ. ವೈದ್ಯರ ಸಲಹೆ ಸೂಚನೆಗಳನ್ನು ಸರಿಯಾಗಿ ಪಾಲಿಸಿದರೆ ಆರೋಗ್ಯದಿಂದ ಇರಲು ಸಾಧ್ಯ’ ಎಂದರು.
ಯೋಜನಾಧಿಕಾರಿ ಸತೀಶ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಯೋಗ ಶಿಕ್ಷಕ ಲೋಕೇಶ, ಮೇಲ್ವಿಚಾರಕ ತ್ರೀವೇಣಿ ಬಾವಿಕಟ್ಟಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಗೀತಾ, ಸೇವಾ ಪ್ರತಿನಿಧಿ ರತ್ನಾ ಸೇರಿ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.