ADVERTISEMENT

ಯಲಬುರ್ಗಾ: ಕಿತ್ತುಹೋಗಿದ್ದ ಸೇತುವೆ ದುರಸ್ತಿ ಆರಂಭ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 5:09 IST
Last Updated 2 ಸೆಪ್ಟೆಂಬರ್ 2025, 5:09 IST
ಯಲಬುರ್ಗಾ ತಾಲ್ಲೂಕು ಗೆದಗೇರಿ ಮಲ್ಕಸಮುದ್ರ ರಸ್ತೆ ಮಧ್ಯೆ ಇದ್ದ ಕಿರು ಸೇತುವೆಯ ದುರಸ್ತಿ ನಡೆದಿದೆ
ಯಲಬುರ್ಗಾ ತಾಲ್ಲೂಕು ಗೆದಗೇರಿ ಮಲ್ಕಸಮುದ್ರ ರಸ್ತೆ ಮಧ್ಯೆ ಇದ್ದ ಕಿರು ಸೇತುವೆಯ ದುರಸ್ತಿ ನಡೆದಿದೆ   

ಪ್ರಜಾವಾಣಿ ವಾರ್ತೆ

ಯಲಬುರ್ಗಾ: ತಾಲ್ಲೂಕಿನ ಗೆದಗೇರಿ-ಮಲ್ಕಸಮುದ್ರ ಗ್ರಾಮದ ಸಂಪರ್ಕ ರಸ್ತೆಯ ಮಧ್ಯ ಇರುವ ಕಿರು ಸೇತುವೆಯ ದುರಸ್ತಿ ಕಾರ್ಯ ತ್ವರಿತವಾಗಿ ಸಾಗಿದೆ.

ಸತತ ಮಳೆಯ ಪರಿಣಾಮ ರಸ್ತೆಹಾಳಾಗಿ ಸಂಪರ್ಕ ಕಡಿತಗೊಂಡಿದ್ದರಿಂದ ಗ್ರಾಮಸ್ಥರಿಗೆ ಹಾಗೂ ರೈತರಿಗೆ ತೀವ್ರ ರೀತಿಯಲ್ಲಿ ತೊಂದರೆಯಾಗಿತ್ತು. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮವು ನಿರ್ವಹಿಸಿದ್ದ ಈ ಕಾಮಗಾರಿಯು ನಿರ್ಮಾಣಗೊಂಡು ಕೇವಲ ಆರೇಳು ತಿಂಗಳಾಗಿತ್ತು. ಒಂದೇ ಮಳೆಗೆ ಕಿತ್ತುಹೋಗಿದ್ದಕ್ಕೆ ಗೆದಗೇರಿ ಮತ್ತು ಮಲ್ಕಸಮುದ್ರ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಹೆಚ್ಚಿನ ಸಂಖ್ಯೆಯ ರೈತಾಪಿ ವರ್ಗದ ಜನರು ಇದೇ ರಸ್ತೆಯಲ್ಲಿ ಸಂಚಾರ ನಡೆಯುತ್ತಿರುವುದರಿಂದ ರಸ್ತೆ ದುರಸ್ಥಿ ಕಾರ್ಯ ತ್ವರಿತವಾಗಿ ನಡೆಯಬೇಕಾಗಿತ್ತು. ಈ ಕುರಿತು ‘ಪ್ರಜಾವಾಣಿ’ಯ ಆಗಸ್ಟ್ 20ರ ಸಂಚಿಕೆಯಲ್ಲಿ ‘ಆರೇ ತಿಂಗಳಲ್ಲಿ ಕಿತ್ತುಹೋದ ಸೇತುವೆ’ ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಕಟಿಸಲಾಗಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದಲೇ ದುರಸ್ತಿ ಕಾರ್ಯ ನಡೆಯುತ್ತಿದೆ. ಒಂದು ವಾರದಲ್ಲಿ ಎಲ್ಲ ಕೆಲಸ ಪೂರ್ಣಗೊಳ್ಳಲಿದೆ. ಮತ್ತೆ ಗ್ರಾಮಸ್ಥರ ಸಂಚಾರಕ್ಕೆ ಸಿದ್ಧವಾಗಲಿದೆ ಎಂದು ಕಟ್ಟಡ ನಿರ್ವಹಿಸುವ ಸಿಬ್ಬಂದಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.