ಗಂಗಾವತಿ: ನಗರದ ಎಪಿಎಂಸಿ ಗಂಜ್ ಆವರಣದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ, ಯೋಗ, ಧ್ಯಾನ ಮತ್ತು ಆಧ್ಯಾತ್ಮ ಬಳಗದಿಂದ ಅಂತರರಾಷ್ಟ್ರೀಯ ಯೋಗ ದಿನದ ನಿಮಿತ್ತ ಶುಕ್ರವಾರ ನಗರದಲ್ಲಿ ಸಂಚರಿಸಿ ಜಾಥಾ ಮೂಲಕ ಜಾಗೃತಿ ಮೂಡಿಸಲಾಯಿತು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ‘ಜೀವನದಲ್ಲಿ ಪ್ರತಿಯೊಬ್ಬರೂ ಯೋಗ, ವ್ಯಾಯಾಮ, ಜ್ಞಾನ, ಪ್ರಣಾಯಾಮ ಮಾಡುವ ಮೂಲಕ ದೇಹ, ಮನಸ್ಸು ಏಕಾಗ್ರತೆಯಲ್ಲಿ ಇಟ್ಟುಕೊಳ್ಳಬೇಕು. ಯೋಗಾಸನಕ್ಕೆ ಪ್ರಾಚೀನ ಕಾಲದಿಂದಲೂ ಮಹತ್ವವಿದೆ. ದೈಹಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಸ್ವಾಸ್ಥಕ್ಕೆ ಇರುವ ದಾರಿಯೇ ಯೋಗ. ಇದನ್ನು ನಮ್ಮ ದೈನಂದಿನ ಜೀವನಕ್ಕೆ ಅವಿಭಾಜ್ಯ ಅಂಗವಾಗಿ ಮಾಡಿಕೊಳ್ಳಬೇಕು’ ಎಂದು ಹೇಳಿದರು.
ನಂತರ ನಗರದ ಸಿಬಿಎಸ್ ನಿಂದ ಆರಂಭವಾಗದ ಜಾಥಾವು ಗಾಂಧಿ ವೃತ್ತ, ಮಹಾವೀರ, ಗಣೇಶ, ಬಸವಣ್ಣ ವೃತ್ತ ತಲುಪಿ ಸಮಾಪ್ತಿಗೊಂಡಿತು.
ಈ ವೇಳೆ ಮಾಜಿ ಸಂಸದ ಶಿವರಾಮೇಗೌಡ, ಎಸ್.ಬಿ. ಹಂದ್ರಾಳ, ಶಾಂತವೀರ ಸ್ವಾಮಿ, ಮಲ್ಲಿಕಾರ್ಜುನ, ರಘುನಾಥ ಪವಾರ್, ರಮೇಶ ಚೌಡ್ಕಿ, ಶರಬಣ್ಣ, ಸಿದ್ದಲಿಂಗೇಶ ಪೋಲಭಾವಿ, ಬಸವರಾಜ ಸೇರಿ ವಿವಿಧ ಟ್ರಸ್ಟ್, ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.