ADVERTISEMENT

ಅಘಲಯದ ದೊಡ್ಡಕೆರೆಗೆ ಬಾಗಿನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 8:37 IST
Last Updated 29 ಅಕ್ಟೋಬರ್ 2017, 8:37 IST
ತಾಲ್ಲೂಕಿನ ದೊಡ್ಡಕೆರೆಗಳಲ್ಲಿ ಒಂದಾದ ಅಘಲಯದ ಕೆರೆಯು 10 ವರ್ಷಗಳ ನಂತರ ಸಂಪೂರ್ಣ ಭರ್ತಿಯಾದ ಕಾರಣ ಗ್ರಾಮಸ್ಥರು ಗಂಗಾಪೂಜೆ ನೆರವೇರಸಿ ಬಾಗಿನ ಅರ್ಪಿಸಿದರು
ತಾಲ್ಲೂಕಿನ ದೊಡ್ಡಕೆರೆಗಳಲ್ಲಿ ಒಂದಾದ ಅಘಲಯದ ಕೆರೆಯು 10 ವರ್ಷಗಳ ನಂತರ ಸಂಪೂರ್ಣ ಭರ್ತಿಯಾದ ಕಾರಣ ಗ್ರಾಮಸ್ಥರು ಗಂಗಾಪೂಜೆ ನೆರವೇರಸಿ ಬಾಗಿನ ಅರ್ಪಿಸಿದರು   

ಕೆ.ಆರ್.ಪೇಟೆ: ತಾಲ್ಲೂಕಿನ ದೊಡ್ಡಕೆರೆಗಳಲ್ಲಿ ಒಂದಾದ ಅಘಲಯದ ಕೆರೆಯು 10 ವರ್ಷಗಳ ನಂತರ ಭರ್ತಿಯಾದ ಕಾರಣ ಗ್ರಾಮಸ್ಥರು ಈಚೆಗೆ ಸಡಗರದಿಂದ ಗಂಗಾಪೂಜೆ ನೆರವೇರಸಿ ಬಾಗಿನ ಅರ್ಪಿಸಿದರು.

ಗ್ರಾಮದಲ್ಲಿ ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡ ಗ್ರಾಮಸ್ಥರು ಮತ್ತು ಮಹಿಳೆಯರು ಕೆರೆಯ ಬಳಿಗೆ ಬಂದು ಸಾಂಪ್ರದಾಯಕ ಪೂಜೆ ನೆರವೇರಿಸಿ ಕೆರೆಗೆ ಬಾಗಿನ ಅರ್ಪಿಸಿ ಜಯಘೋಷ ಹಾಕಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಜಾನಕೀರಾಂ, ಟಿಎಪಿಸಿಎಂಎಸ್ ಅಧ್ಯಕ್ಷ ಎ.ಎಸ್.ಶ್ರೀಧರ್, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಎಸ್.ರಮೇಶ್, ನಿವೃತ್ತ ಶಿಕ್ಷಕ ನಂಜಪ್ಪ , ಗ್ರಾಮದ ಮುಖಂಡರಾದ ಬೋರೇಗೌಡ, ಕಾಳೇಗೌಡ, ಎ.ಎಲ್.ನಂಜಪ್ಪ, ಕೆ.ಸಿದ್ದೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.