ADVERTISEMENT

ಆರತಿಗೆ ₹ 2 ಸಾವಿರ ನೋಟು ಹಾಕಿದ ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 9:54 IST
Last Updated 30 ಮಾರ್ಚ್ 2018, 9:54 IST

ಮಂಡ್ಯ:‌ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಗುರುವಾರ ಆರತಿ ತಟ್ಟೆಗೆ ₹ 2 ಸಾವಿರ ನೋಟು ಹಾಕಿದರು.

ಕಾಂಗ್ರೆಸ್‌ ತ್ಯಜಿಸಿ ಜೆಡಿಎಸ್‌ ಸೇರಿದ ಮುಖಂಡ ಎಚ್‌.ಪಿ.ಮಹೇಶ್‌ ಅವರ ಮನೆಗೆ ಭೇಟಿ ನೀಡಿದ್ದರು. ಮನೆಗೆ ಬಂದ ಮುಖಂಡರನ್ನು ಆರತಿ ಮಾಡಿ ಸ್ವಾಗತಿಸಲಾಯಿತು. ಆಗ ಅವರು, ಜೇಬಿನಿಂದ ಹಣ ತೆಗೆದು ₹ 2 ಸಾವಿರ ನೋಟನ್ನು ಆರತಿ ತಟ್ಟೆಗೆ ಹಾಕಿದರು. ಕೆಲವರು ಹಣ ಹಾಕುವುದು ಬೇಡ ಎಂದು ಹೇಳಲು ಮುಂದಾದರು. ಆದರೆ ಅಷ್ಟೊತ್ತಿಗಾಗಲೇ ಹಣ ಹಾಕಿದ್ದರು.

ಆದರೆ, ಈ ಬೆಳವಣಿಗೆ ಸ್ಥಳದಲ್ಲಿದ್ದ ಅನೇಕ ಮುಖಂಡರ ಹುಬ್ಬೇರುವಂತೆ ಮಾಡಿತು.

ADVERTISEMENT

ಹಣ ನೀಡಿದ ಆರೋಪ: ಭೇಟಿ ಸಂದರ್ಭದಲ್ಲಿ ಅಬಕಾರಿ ಉದ್ಯಮಿ ಹನಕೆರೆ ಪುಟ್ಟಪ್ಪ ಅವರು ಜಿಲ್ಲೆಯ ಹಲವು ರಾಜಕಾರಣಿಗಳಿಗೆ ಹಣ ನೀಡಿರುವುದಾಗಿ ಬಹಿರಂಗವಾಗಿ ಹೇಳಿದರು.

‘ನಿಮ್ಮ ಜೊತೆ ಬಂದಿರುವ ಎಲ್ಲಾ ಮುಖಂಡರಿಗೆ ಹಣ ಕೊಟ್ಟಿದ್ದೇನೆ. ಆದರೂ ನಮಗೆ ರಾಜಕೀಯವಾಗಿ ಸ್ಥಾನ ನೀಡಿಲ್ಲ’ ಎಂದು ಏರುಧ್ವನಿಯಲ್ಲಿ ಅಸಮಾಧಾನ ಹೊರ ಹಾಕಿದರು.

ಬರುವ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡುತ್ತೇವೆ ಎಂದು ಎಚ್‌ಡಿಕೆ ಸಮಾಧಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.