ಮಂಡ್ಯ: ಒತ್ತಡ ಜೀವನಶೈಲಿಯನ್ನು ಬದಲಾಯಿಸಿಕೊಳ್ಳದಿದ್ದರೆ ಮಧುಮೇಹಕ್ಕೆ ತುತ್ತಾಗಬೇಕಾಗುತ್ತದೆ ಎಂದು ಮಿಮ್ಸ ಸೂಪರಿಂಟೆಂಡೆಂಟ್ ಡಾ.ಕೆ.ಎಂ. ಶಿವಕುಮಾರ್ ಎಚ್ಚರಿಸಿದರು.
ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಶುಕ್ರವಾರ ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಒತ್ತಡ ರಹಿತ ಜೀವನಶೈಲಿ ನಿಮ್ಮದಾಗಿಸಿಕೊಳ್ಳಬೇಕು. ವ್ಯಾಯಾಮ ಮಾಡಬೇಕು. ಆಹಾರ ಸೇವನೆಯ ಬಗೆಗೆ ಲಕ್ಷ್ಯವಹಿಸಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.
ನಿಯಮಿತವಾಗಿ ಔಷಧ ತೆಗೆದುಕೊಂಡು, ವೈದ್ಯರು ಸೂಚಿಸಿದ ಆಹಾರ ಸೇವನೆ ಮಾಡಿದರೆ ನಿಯಂತ್ರಣದಲ್ಲಿಟ್ಟುಕೊಳಳಬಹುದು ಎಂದು ಹೇಳಿದರು.
ಕಮ್ಯುನಿಟಿ ಮೆಡಿಸಿನ್ ಮುಖ್ಯಸ್ಥ ಡಾ.ಬಿ.ಜೆ. ಮಹೇಂದ್ರ ಮಾತನಾಡಿ, ಈಗಿನಿಂದಲೇ ಎಚ್ಚರವಹಿಸದಿದ್ದರೆ ಮುಂದಿನ ದಿನಗಳಲ್ಲಿ ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗಲಿದೆ ಎಂದರು. ಕಾಲೇಜು ಪ್ರಾಂಶುಪಾಲ ಡಾ.ವಿ.ಶ್ರೀಧರ್, ಡಾ.ರಾಮಕೃಷ್ಣ, ಡಾ.ರೇಖಾ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.