ADVERTISEMENT

ಕಂಪ್ಯೂಟರ್ ಜ್ಞಾನ ಅಗತ್ಯ: ಮಹದೇವಸ್ವಾಮಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2011, 9:45 IST
Last Updated 2 ಮಾರ್ಚ್ 2011, 9:45 IST

ಕೃಷ್ಣರಾಜಪೇಟೆ: ಇಂದಿನ ಅತ್ಯಗತ್ಯಗಳಲ್ಲಿ ಒಂದಾದ ಕಂಪ್ಯೂಟರ್ ಜ್ಞಾನವನ್ನು ಹೊಂದುವ ಮೂಲಕ ಉತ್ತಮ ಉದ್ಯೋಗಗಳನ್ನು ದಕ್ಕಿಸಿಕೊಳ್ಳಲು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮುಂದಾಗ ಬೇಕು ಎಂದು ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿದೇರ್ಶಕ ಬಿ.ಎಂ.ಮಹದೇವಸ್ವಾಮಿ ತಿಳಿಸಿದರು.

ಪಟ್ಟಣದ ಕಿಯೋನಿಕ್ಸ್ ಯುವಡಾಟ್‌ಕಾಂ ಸಂಸ್ಥೆಯ ವತಿಯಿಂದ ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿದ್ಯಾರ್ಥಿಗಳಿಗೆ ನಡೆಯುತ್ತಿರುವ ಕಂಪ್ಯೂಟರ್ ತರಬೇತಿ ಶಿಬಿರದಲ್ಲಿ ಅವರು ಮಂಗಳ ವಾರ ಪಾಲ್ಗೊಂಡು ಮಾತನಾಡಿದರು.

ಇದು ಸ್ಪರ್ಧಾತ್ಮಕ ಯುಗವಾಗಿದ್ದು, ಆಧುನಿಕ ತಂತ್ರ ಜ್ಞಾನದ ಅರಿವಿನ ಅನಿವಾರ್ಯತೆ ಎಲ್ಲೆಡೆ ಕಂಡುಬರುತ್ತಿದೆ. ಆಂಗ್ಲಭಾಷೆ ಮತ್ತು ಕಂಪ್ಯೂಟರ್ ಜ್ಞಾನದ ಅಗತ್ಯ ಕೂಡ ಎಲ್ಲೆಡೆ ಹೆಚ್ಚಾಗಿದೆ.  ಆದ್ದರಿಂದ ಎಲ್ಲ ಗ್ರಾಮೀಣ ಮಕ್ಕಳು ತಮ್ಮ ಮನೆ ಬಾಗಿಲುಗಳಲ್ಲಿ ದೊರೆಯುವ ಸವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ನುಡಿದರು.
 ಪ್ರಾಚಾರ್ಯ ವಿ.ರಾಜಶೇಖರ್, ಸ.ಪ.ಪೂ. ಕಾಲೇಜು ಅಕ್ಕಿಹೆಬ್ಬಾಳು ಇಲ್ಲಿನ ಪ್ರಾಚಾರ್ಯ ಡಾ.ಶಂಕರೇಗೌಡ, ಕಿಯೋನಿಕ್ಸ್ ಕೇಂದ್ರದ ಮುಖ್ಯಸ್ಥ ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.