ಶ್ರೀರಂಗಪಟ್ಟಣ: ಕನ್ನಡಿಗರಿಗೆ ಕನ್ನಡ ಅವ್ವ ನಂತಿದ್ದರೆ, ಇಂಗ್ಲಿಷ್ ಅತ್ತೆ ಎಂದು ಜಾನಪದ ವಿದ್ವಾಂಸ ವ.ನಂ.ಶಿವರಾಮು ಹೇಳಿದರು.
ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಈಚೆಗೆ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಗರ ಪ್ರದೇಶಗಳಲ್ಲಿ ಕನ್ನಡ ಭಾಷೆ ವಿರೂಪ ಗೊಳಿಸಲಾಗುತ್ತಿದೆ. ಅನುಕರಣೆ ಮತ್ತು ತೋರಿಕೆ ಪ್ರವೃತ್ತಿ ಹೆಚ್ಚುತ್ತಿದೆ. ಇಂಗ್ಲಿಷ್‌ನ ಬೂಟಾಟಿಕೆಯ ಅನುಕರಣೆ ಮೂರ್ಖತನದ್ದು ಎಂದ ಅವರು ಪ್ರತಿಭಾ ಪಲಾಯನ ಸಲ್ಲದು ಎಂದು ಕಿವಿ ಮಾತು ಹೇಳಿದರು.
ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ಗೆ ನಿವೇಶ ಕಲ್ಪಿಸಿಕೊಡ ಲಾಗುವುದು ಎಂದು ಭರವಸೆ ನೀಡಿದರು. ಪ್ರಾಂಶುಪಾಲ ನಂಜುಂಡಸ್ವಾಮಿ, ಪ್ರೊ.ಕರಿಮುದ್ದೀನ್, ಡಾ,ಬಿ.ಸುಜಯಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಗದೀಶ್, ಕಸಾಪ ಗೌರವ ಕಾರ್ಯದರ್ಶಿ ಲೋಕೇಶ್, ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ, ಎಇಇ ತ್ರಯಂಬಕ್, ಪುರಸಭೆ ಮುಖ್ಯಾಧಿಕಾರಿ ರಾಜಣ್ಣ, ರಾಜಶೇಖರ್, ಎಚ್.ಆರ್.ಧನ್ಯಕುಮಾರ್, ಚಂದ್ರಶೇಖರಯ್ಯ, ಗಂಜಾಂ ಪುಟ್ಟರಾಮು ಇದ್ದರು.
ಪುರಸ್ಕೃತರು: 2011-12ನೇ ಸಾಲಿನ ಎಸ್ಸೆಸ್ಸೆಲ್ಸಿ ಅಪರೀಕ್ಷೆಯಲ್ಲಿ ಕನ್ನಡದ ಹೆಚ್ಚು ಅಂಕ ಪಡೆದ ಅರಕೆರೆ ಸರ್ಕಾರಿ ಪ್ರೌಢಶಾಲೆಯ ಬಿ.ಶೀಲ (124), ಮೊಗರಹಳ್ಳಿ ಮಹಾಲಕ್ಷ್ಮಿ ಪ್ರೌಢಶಾಲೆಯ ಅಭಿಷೇಕ (124) ಟಿ.ಚೈತ್ರಶ್ರೀ (123), ಸಿ.ಮಂಜುಳಾ (123), ದೊಡ್ಡಪಾಳ್ಯ ಸರ್ಕಾರಿ ಪ್ರೌಢಶಾಲೆಯ ಮಾನಸ (123) ಎಂ.ಕೆ.ಆನಂದಾಳ್ವಾರ್ ಶಾಲೆಯ ಇಚ್ಛಿತಾ (123) ಹಾಗೂ ದ್ವಿತೀಯ ಪಿಯುಸಿ ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿರುವ ಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದೇವಿಕಾ (98), ನಗುವನಹಳ್ಳಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಭೈರವಿ(96) ಅವರನ್ನು ಪುರಸ್ಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.