ಮದ್ದೂರು: ತಾಲ್ಲೂಕಿನ ಬೆಕ್ಕಳಲೆ ಗ್ರಾಮದ ರಾಜಕೀಯ ದ್ವೇಷ ಮತ್ತೆ ಭುಗಿಲೆದ್ದಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಸೇರಿದ ಕಾರ್ಯ ಕರ್ತರು ಪರಸ್ಪರ ಕಬ್ಬಿನ ಬೆಳೆಗೆ ಬೆಂಕಿ ಹಚ್ಚುವ ಮೂಲಕ ಲಕ್ಷಾಂತರ ರೂ. ಬೆಳೆ ಬೆಂಕಿಗೆ ಆಹುತಿಯಾಗಿದೆ. ಒಟ್ಟು 9 ಎಕರೆ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು 7 ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿರುವ ಘಟನೆ ನಡೆದಿದೆ.
ಕಳೆದ ವರ್ಷ ಗ್ರಾಪಂ ಚುನಾವಣೆ ಬಳಿಕ ನಡೆದ ರಾಜಕೀಯ ಘರ್ಷಣೆ ಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಪರಮೇಶ್ ಎಂಬವರ ಕೈ ಕಡಿದು ಹತ್ಯೆ ಮಾಡಲಾಗಿತ್ತು. ಈ ಕೊಲೆಗೆ ಸಂಬಂ ಧಿಸಿದಂತೆ ನ್ಯಾಯಾಲಯದಲ್ಲಿ ಇನ್ನು ಪ್ರಕರಣ ನಡೆಯುತ್ತಿರುವಾಗಲೇ ಗ್ರಾಮದಲ್ಲಿ ಮತ್ತೆ ಅಶಾಂತಿ ಏರ್ಪಟ್ಟಿದೆ. ಕಳೆದ ಶನಿವಾರ ರಾತ್ರಿ ಪರಮೇಶ್ ತಂದೆ ಮಾದೇಗೌಡ ಅವರಿಗೆ ಸೇರಿದ 4 ಎಕರೆ ಕಬ್ಬಿನ ಗದ್ದೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಈ ಕೃತ್ಯವನ್ನು ಜೆಡಿಎಸ್ ಕಾರ್ಯಕರ್ತರು ಮಾಡಿ ್ದದರು ಎಂದು ಆರೋಪಿಸಿ ಮೃತ ಪರ ಮೇಶ್ ಪತ್ನಿ ಶರ್ಮಿಳಾ ಕೊಪ್ಪ ಪೊಲೀಸರಿಗೆ ದೂರು ನೀಡಿದ್ದರು.
ಪರಮೇಶ್ ಕೊಲೆ ಸಂಬಂಧ ಜೈಲಿನಲ್ಲಿರುವ ಆರೋಪಿಗಳ ಬಿಡು ಗಡೆ ತಡೆಯಲು ಕಾಂಗ್ರೆಸ್ ನವರೇ ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಜೆಡಿಎಸ್ ಮುಖಂಡರು ಆರೋಪಿ ಸಿದ್ದರು. ಈ ಆರೋಪದ ಬೆನ್ನ ಹಿಂದೆ ಯೇ ಬುಧವಾರ ರಾತ್ರಿ ಜೆಡಿಎಸ್ ಮುಖಂಡ ಬಿ.ಎಂ.ರಘು ಅವರಿಗೆ ಸೇರಿದ 4 ಎಕರೆ ಕಬ್ಬಿನ ಗದ್ದೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಈ ಘಟನೆಯಿಂದಾಗಿ ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರ ನಡುವೆ ದ್ವೇಷ ಭುಗಿಲೆದ್ದಿದ್ದು, ಗ್ರಾಮದಲ್ಲಿ ಆತಂಕದ ಸ್ಥಿತಿ ಏರ್ಪಟ್ಟಿದೆ.
ಗ್ರಾಮದ ಎಲ್ಲ ಪುರುಷರು ಮನೆ ತೊರೆದು ಪರಾರಿಯಾಗಿದ್ದಾರೆ. ಗ್ರಾಮದಲ್ಲಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಮಾತ್ರ ಇದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮದಲ್ಲಿ ಮೀಸಲು ತುಕಡಿಯೊಂದನ್ನು ನಿಯೋಜಿಸಿ, ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.