ADVERTISEMENT

ಕಿರುತೆರೆಯಿಂದ ನಾಟಕಕ್ಕೆ ಕುತ್ತು: ಶಾಸಕ

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 5:03 IST
Last Updated 6 ಜನವರಿ 2014, 5:03 IST

ಮದ್ದೂರು: ಆಧುನಿಕ ಸಿನಿಮಾ ಹಾಗೂ ಕಿರುತೆರೆ ಹಾವಳಿಯಿಂದಾಗಿ ಇಂದು ಪೌರಾಣಿಕ ನಾಟಕ ಕಲೆ ನಶಿಸುತ್ತಿದೆ ಎಂದು  ಎಂದು ಶಾಸಕ ಡಿ.ಸಿ. ತಮ್ಮಣ್ಣ ವಿಷಾದ ವ್ಯಕ್ತಪಡಿಸಿದರು.

ತಾಲೂಕಿನ ಕುರುಬರದೊಡ್ಡಿ ಗ್ರಾಮದಲ್ಲಿ ರಾಮಕೃಪಾ ಪೋಷಿತ ನಾಟಕ ಮಂಡಳಿ ಏರ್ಪಡಿಸಿದ್ದ ‘ಮಾನವೇಂದ್ರನ ಗರ್ವಭಂಗ’ ಎಂಬ ಪೌರಾಣಿಕ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು. ನಾಟಕ ಕಲೆ ಅಭಿಜಾತ ಕಲೆಯಾಗಿದ್ದು, ನಿಜವಾದ ಕಲಾವಿದನಿಂದ ಮಾತ್ರ ಈ ಕಲೆ ಪೋಷಣೆ ಸಾಧ್ಯ ಎಂದರು.

ಜಿಲ್ಲಾಪಂಚಾಯಿತಿ  ಸದಸ್ಯ ರವಿ, ತಾಲೂಕು ಪಂಚಾಯಿತಿ ಸದಸ್ಯ ಬಿಳಿಗೌಡ, ಮುಖಂಡರಾದ ದಾಸೇಗೌಡ, ಎ. ಶಂಕರ್, ಹೂತಗೆರೆ ದಿಲೀಪ್‌ ಕುಮಾರ್,ಪ್ರಮೀಳ ಶಿವಲಿಂಗಯ್ಯ, ರಾಜಣ್ಣ, ಗಿರೀಶ್, ಜಗದೀಶ್, ಆನಂದ್, ರಾಜು, ಶಿವಲಿಂಗಯ್ಯ, ಮಂಜು, ರಾಜು.  ರವಿ, ಚಾಕನಕೆರೆ ಕುಮಾರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.