ADVERTISEMENT

ಕುಡಿಯುವ ನೀರು ಕೇಂದ್ರ ಬಂದ್: ಪರದಾಟ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 7:30 IST
Last Updated 24 ಫೆಬ್ರುವರಿ 2011, 7:30 IST

ಶ್ರೀರಂಗಪಟ್ಟಣ: ಪಟ್ಟಣದ ಶ್ರೀರಂಗ ನಾಥಸ್ವಾಮಿ ದೇವಾಲಯ ಬಳಿ ಭಕ್ತ ಜನರು ಹಾಗೂ ಸ್ಥಳೀಯರ ಅನು ಕೂಲಕ್ಕೆ ತೆರೆದಿದ್ದ ಕುಡಿಯುವ ನೀರು ಕೇಂದ್ರ ಕಳೆದ ಮೂರು ತಿಂಗಳಿನಿಂದ ಬಂದ್ ಆಗಿದ್ದು, ಕುಡಿ ಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ದೇವಾಲಯದ ಬಲ ಭಾಗದಲ್ಲಿ, ದಶಕಗಳ ಹಿಂದೆ ನಿರ್ಮಿಸಿರುವ ಕುಡಿಯುವ ನೀರು ಕೇಂದ್ರ ನಿಷ್ಪ್ರ ಯೋಜಕವಾಗಿದೆ. ಉದ್ಯಾನ ನಿರ್ಮಾ ಣಗೊಂಡ ಬಳಿಕ ಬೀಗ ಹಾಕುತ್ತಿದ್ದು, ಈ ಕೇಂದ್ರಕ್ಕೆ ತೆರಳಿ ನೀರು ಬಸಿಯಲು ಕೂಡ ಅಸಾಧ್ಯವಾಗಿದೆ. ಇದರಿಂದ ದೂರದ ಊರುಗಳಿಂದ ಬರುವ ಭಕ್ತ ಜನರು ಹಾಗೂ ಸ್ಥಳೀಯ ವ್ಯಾಪಾರ ಸ್ಥರು ಕುಡಿಯುವ ನೀರಿಗೆ ಬವಣೆ ಪಡುತ್ತಿದ್ದಾರೆ. ‘ದೇವಾಲಯ ಆವ ರಣದ ಕುಡಿಯುವ ನೀರಿನ ಕೇಂದ್ರ ಸ್ಥಗಿತ ಗೊಂಡು ನಾಲ್ಕು ತಿಂಗಳು ಕಳೆದಿದೆ. ಕೇಂದ್ರದ ಒಳಾವರಣದಲ್ಲಿ ಗಲೀಜು ನಿಂತಿದ್ದು, ವಾಸನೆ ಬೀರುತ್ತಿದೆ.
 
ನೀರಿನ ಸಮಸ್ಯೆ ಕುರಿತು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಯಾವುದ ಕ್ರಮ ಕೈಗೊಂಡಿಲ್ಲ. ಸ್ಥಳೀಯ ಪುರಸಭೆ ಹಾಕಿರುವ ನಲ್ಲಿಯಲ್ಲಿ ಕೂಡ ಸರಿ ಯಾಗಿ ನೀರು ಬರುತ್ತಿಲ್ಲ. ದೇವಾಲ ಯಕ್ಕೆ ಬರುವ ಭಕ್ತರು ಹಾಗೂ ಸ್ಥಳೀಯ ವ್ಯಾಪಾರಿಗಳು ಕಾಸು ಕೊಟ್ಟು ನೀರು ಕುಡಿ ಯುವ ಪರಿಸ್ಥಿತಿ ಬಂದೊದಗಿದೆ’ ಎಂದು ಶ್ರೀರಂಗ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ವಿಶ್ವನಾಥ್, ಎಂ. ಶ್ರೀನಿವಾಸ್ ಇತರರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.