ADVERTISEMENT

ಕೆಸರು ಗದ್ದೆಯಲ್ಲಿ ಬಿದ್ದರು, ಎದ್ದರು, ಓಡಿದರು...

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 6:46 IST
Last Updated 24 ಫೆಬ್ರುವರಿ 2018, 6:46 IST

ಮದ್ದೂರು: ಅಲ್ಲಿ ಸಂಭ್ರಮದ ಎಲ್ಲೆ ಮೀರಿತ್ತು. ಕೆಲವರು ಕೆಸರು ಗದ್ದೆಯಲ್ಲಿ ಕಾಲು ಸಿಲುಕಿ ಬಿದ್ದು ಉರುಳಾಡಿದರೆ, ಮತ್ತೆ ಕೆಲವರು ಹೂತು ಹೋಗುತ್ತಿದ್ದ ಕಾಲುಗಳನ್ನು ಶಕ್ತಿಯುತವಾಗಿ ಕಿತ್ತು ಕೊಂಡು ಓಡಿ ಗುರಿ ಮುಟ್ಟಿ ವಿಜಯ ಸಾಧಿಸಿದರು.

ಇವು ನೀಲಕಂಠನಹಳ್ಳಿ ಗ್ರಾಮ ದಲ್ಲಿ ಸ್ವಾಮಿ ವಿವೇಕಾನಂದ ಯುವ ಸಾಂಸ್ಕೃತಿಕ ಕ್ರೀಡಾ ಸಂಘ ಶುಕ್ರವಾರ ಆಯೋಜಿಸಿದ್ದ ಕೆಸರುಗದ್ದೆ ಕ್ರೀಡೋತ್ಸವದಲ್ಲಿ ಕಂಡು ಬಂದ ದೃಶ್ಯಗಳು.

ಗ್ರಾಮದಲ್ಲಿ ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜು ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯರು ಕೆಸರು ಗದ್ದೆ ಓಟ, ಕೆಸರು ಗದ್ದೆಯಲ್ಲಿ ನೀರು ತುಂಬಿದ ಬಿಂದಿಗೆ ಹೊತ್ತು ಓಟ, ಕೂಸುಮರಿ ಓಟ ಸ್ಪರ್ಧೆಗಳಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ವಿಜೇತರಿಗೆ ಗ್ರಾಮದ ಮುಖಂಡರಾದ ಟಿ.ಶಿವಪ್ಪ, ಕೆಂಪರಾಜು ಬಹುಮಾನ ವಿತರಿಸಿದರು. ಮಧು ಕುಮಾರ್, ನಿಸರ್ಗ, ಚಿಕ್ಕಮೊಗ, ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.