ಮದ್ದೂರು: ಪಟ್ಟಣದ ಎಪಿಎಂಸಿ ಮಾರುಕಟೆ ಇಡೀ ರಾಜ್ಯದಲ್ಲಿಯೇ ಅತೀ ದೊಡ್ಡ ಎಳನೀರು ಮಾರುಕಟ್ಟೆಯಾಗಿದ್ದು, 5ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಗಣಕೀಕೃತ ತೂಕ ಮಾಪನ ಯಂತ್ರವನ್ನು ಅಳವಡಿಸಲಾಗಿದೆ ಎಂದು ಶಾಸಕ ಡಿ.ಸಿ. ತಮ್ಮಣ್ಣ ತಿಳಿಸಿದರು.
ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ 40ಮೆಟ್ರಿಕ್ ಟನ್ ಸಾಮರ್ಥ್ಯದ ತೂಕಮಾಪನ ಯಂತ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗಣಕೀಕೃತ ತೂಕದ ಯಂತ್ರವನ್ನು ಅಳವಡಿಸಿರುವುದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.
ಮಾರುಕಟ್ಟೆಯಲ್ಲಿ ಶೌಚಾಲಯ, ವಸತಿಗೃಹ ಸೇರಿದಂತೆ ಮಾರುಕಟ್ಟೆ ಪ್ರಾಂಗಣಗಳ ಕೊರತೆಯಿದೆ. ಈ ಕುರಿತು ಮಾರುಕಟ್ಟೆ ಸಚಿವರ ಬಳಿ ಚರ್ಚಿಸಿ ಅಗತ್ಯ ಅನುದಾನ ಬಿಡುಗಡೆಗೊಳಿಸಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.
ಎಪಿಎಂಸಿ ಅಧ್ಯಕ್ಷೆ ಸವಿತಾರಾಜಣ್ಣ, ಉಪಾಧ್ಯಕ್ಷ ಬಿಳಿಯಪ್ಪ, ವರ್ತಕರ ಸಂಘದ ಅಧ್ಯಕ್ಷ ರವಿಚನ್ನಸಂದ್ರ, ಕಾರ್ಯದರ್ಶಿ ಎ. ರಾಜು, ಎಪಿಎಂಸಿ ಕಾರ್ಯದರ್ಶಿ ವೆಂಕಟರಮಣರೆಡ್ಡಿ, ಮುಖಂಡರಾದ ಕೆ.ಟಿ. ಸುರೇಶ್, ಹೂತಗೆರೆದಿನೇಶ್, ಯೋಗಾನಂದ, ಚಾಕನಕೆರೆ ಕುಮಾರ್ ಸೇರಿದಂತೆ ಎಪಿಎಂಸಿ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.