ADVERTISEMENT

ಚಲುವನಾರಾಯಣಸ್ವಾಮಿ ಅದ್ದೂರಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 8:35 IST
Last Updated 19 ಮಾರ್ಚ್ 2011, 8:35 IST

ಮೇಲುಕೋಟೆ: ಚಲುವನಾರಾಯಣಸ್ವಾಮಿ ಮಹಾರಥೋತ್ಸವ ಶುಕ್ರವಾರ ಸಡಗರ ಸಂಭ್ರಮದೊಂದಿಗೆ ಅದ್ದೂರಿಯಾಗಿ ನೆರ ವೇರಿತು. ಮಧ್ಯಾಹ್ನ 12 ಗಂಟೆಗೆ ಆರಂಭವಾದ ಮಹಾರಥೋತ್ಸವದಲ್ಲಿ ನಾಡಿನ ವಿವಿಧ ಭಾಗ ಗಳಿಂದ 50 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಸಂಭ್ರಮದ ಕ್ಷಣಕ್ಕೆ ಸಾಕ್ಷಿ ಯಾದರು.

ಚಲುವನಾರಾಯಣಸ್ವಾಮಿಯ ಬೃಹದ್ ರಥಕ್ಕೆ ಭಕ್ತರು ಹಣ್ಣುಜವನ, ಉಪ್ಪು, ಮೆಣಸು ಸಮರ್ಪಿಸುವ ಮೂಲಕ ಹರಕೆ ಸಲ್ಲಿಸಿದರು. ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರ ದಾಹ ತಣಿಸಲು ರಸ್ತೆಯುದ್ದಕ್ಕೂ ಕುಡಿಯುವ ನೀರು, ಮಜ್ಜಿಗೆ, ಪಾನಕ, ತಂಪು ಪಾನೀಯಗಳನ್ನು ವಿತರಿಸಲಾಯಿತು. ಮಹಾರಥೋತ್ಸವದಲ್ಲಿ ಬಹುತೇಕ ಗ್ರಾಮೀಣ ಪ್ರದೇಶದ ಭಕ್ತರೇ ಭಾಗವಹಿಸಿ ಅರ್ಧ ದಿನ ಉಪವಾಸವಿದ್ದು ಸ್ವಾಮಿಯ ದರ್ಶನ ಮಾಡಿ ಅತಿಥಿಗಳಿಗೆ ಆತಿಥ್ಯ ನೀಡಿದ ನಂತರ ಊಟಮಾಡಿ ಭಕ್ತಿಯಿಂದ ಹರಕೆ ಪೂರೈಸಿದರು.

ರಥೋತ್ಸವಕ್ಕೂ ಮುನ್ನ ಅಮ್ಮನವರ ಸನ್ನಿಧಿಯ ಬಳಿ ಯಾತ್ರಾದಾನ ನೆರವೇರಿತು, ವೈರಮುಡಿ ಜಾತ್ರಾಮಹೋತ್ಸವದ ಏಳನೇ ತಿರುನಾಳ್ ಅಂಗವಾಗಿ ನಡೆದ ರಥೊತ್ಸವದಲ್ಲಿ ಯಾತ್ರಾದಾನದ ನಂತರ ಶ್ರೀದೇವಿ, ಭೂದೇವಿ, ಕಲ್ಯಾಣನಾಯಕಿ ಅಮ್ಮನವರೊಂದಿಗೆ ರಾಜಮುಡಿ ಕಿರೀಟದೊಂದಿಗೆ ಅಲಂಕೃತನಾದ ಚೆಲುವನಾರಾಯಣ ಸ್ವಾಮಿಗೆ ಉತ್ಸವ ನೆರವೇರಿತು.

12 ಗಂಟೆಗೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಹನು ಮಂತಪ್ಪ ಮಹಾ ರಥಕ್ಕೆ ಸಾಂಕೇತಿಕ ವಾಗಿ ಚಾಲನೆ ನೀಡಿದ ನಂತರ ಬಿರುಸಿನೊಂದಿಗೆ ಚಲಿಸಿದ ರಥ ದೇವಾಲಯದ ಮುಂಭಾಗಕ್ಕೆ 1 ಗಂಟೆಗೆ ತಲುಪಿದಾಗ ದೇವಾಲಯದ ವತಿಯಿಂದ ಪೂಜೆ ನೆರವೇರಿಸ ಲಾಯಿತು. ನಂತರ ಮುಂದೆ ಸಾಗಿದ ಮಹಾ ರಥ 2.30ಕ್ಕೆ ರಥದ ಮಂಟಪಕ್ಕೆ ಸೇರುವ ಮೂಲಕ ಮುಕ್ತಾಯಗೊಂಡಿತು. ನಂತರ ದೇವಾಲಯ ದಲ್ಲಿ ಸ್ವಾಮಿಗೆ ವೇದಘೋಷ ಮತ್ತು ಮಂಗಳವಾದ್ಯಗಳೊಂದಿಗೆ ಅಭಿಷೇಕ ನೆರವೇರಿತು. ರಥೋತ್ಸವದಲ್ಲಿ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು, ಜಿ.ಪಂ.ಸದಸ್ಯೆ ಜಯ ಲಕ್ಷ್ಮಿ. ಗ್ರಾ.ಪಂ. ಅಧ್ಯಕ್ಷೆ ಮಣಿಮುರುಗನ್, ಉಪಾಧ್ಯಕ್ಷ ಯೋಗನರಸಿಂಹೇಗೌಡ ಸೇರಿ ದಂತೆ ಹಲವರು ಭಾಗವಹಿಸಿದ್ದರು.

ಪಾಂಡವ ಪುರ ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ, ಮೇಲುಕೋಟೆ ಸಬ್ ಇನ್ಸ್‌ಪೆಕ್ಟರ್ ವೆಂಕಟೇಶ್ ಮತ್ತು ಸಿಬ್ಬಂದಿ ರಥೋತ್ಸವಕ್ಕೆ ಪೊಲೀಸ್ ಬಂದೋಬಸ್ತ್ ಮಾಡಿದ್ದರು.
ವೈರಮುಡಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ರಾತ್ರಿ ಕಲ್ಯಾಣಿಯಲ್ಲಿ ತೆಪ್ಪೋತ್ಸವ ಮತ್ತು ಭಾನುವಾರ 10 ಗಂಟೆಗೆ ತೀರ್ಥಸ್ನಾನ ನೆರವೇರಲಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.