ADVERTISEMENT

ಚೌಡೇಶ್ವರಿದೇವಿ ದಿವ್ಯ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 8:36 IST
Last Updated 10 ಮಾರ್ಚ್ 2018, 8:36 IST
ಮದ್ದೂರು ತಾಲ್ಲೂಕು ಹೆಮ್ಮನಹಳ್ಳಿ ಶಕ್ತಿ ದೇವತೆ ಶ್ರೀ ಚೌಡೇಶ್ವರಿ ದೇವಿಯ ದಿವ್ಯ ರಥೋತ್ಸವ ಶುಕ್ರವಾರ ಸಂಭ್ರಮದಿಂದ ನಡೆಯಿತು.
ಮದ್ದೂರು ತಾಲ್ಲೂಕು ಹೆಮ್ಮನಹಳ್ಳಿ ಶಕ್ತಿ ದೇವತೆ ಶ್ರೀ ಚೌಡೇಶ್ವರಿ ದೇವಿಯ ದಿವ್ಯ ರಥೋತ್ಸವ ಶುಕ್ರವಾರ ಸಂಭ್ರಮದಿಂದ ನಡೆಯಿತು.   

ಮದ್ದೂರು: ಸಮೀಪದ ಹೆಮ್ಮನಹಳ್ಳಿ ಶಕ್ತಿ ದೇವತೆ ಶ್ರೀ ಚೌಡೇಶ್ವರಿ ದೇವಿಯ ದಿವ್ಯ ರಥೋತ್ಸವ ಶುಕ್ರವಾರ ಸಂಭ್ರಮದಿಂದ ನಡೆಯಿತು.

ಮುಂಜಾನೆ 4.30ಗಂಟೆಗೆ ಅಗ್ನಿ ಕೊಂಡೋತ್ಸವ ದೇಗುಲ ಆವರಣದಲ್ಲಿ ಅಸಂಖ್ಯಾತ ಭಕ್ತರ ಉದ್ಘೋಷಗಳ ನಡುವೆ ಜರುಗಿತು.

ಬಳಿಕ ದೇವಿಗೆ ವಿಶೇಷ ಚಿನ್ನಾಭರಣ ಹಾಗೂ ಹೂಗಳಿಂದ ಅಲಂಕಾರ ಮಾಡಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಮಧ್ಯಾಹ್ನ 12.30ಗಂಟೆಗೆ ದೇವಿಯ ದಿವ್ಯರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನವ ದಂಪತಿ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ರಥಕ್ಕೆ ಹಣ್ಣು ದವನ ಎಸೆದು ಹರಕೆ, ಅಭೀಷ್ಟೆ ಸಲ್ಲಿಸಿದರು.

ADVERTISEMENT

ರಾತ್ರಿ 10ಕ್ಕೆ ಗರ್ಭಗುಡಿಯಲ್ಲಿ ನಂದಾ ದೀಪ ಹಚ್ಚಿಟ್ಟು, ದ್ವಾರವನ್ನು ಎಳನೀರಿನಿಂದ ಕಲೆಸಿದ ಅಮೃತಮಣ್ಣಿನಿಂದ ಮುಚ್ಚುವ ಮೂಲಕ ಜಾತ್ರೆಗೆ ಅಂತಿಮ ತೆರೆ ಬಿದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.