ಮಂಡ್ಯ: ಬೆಲೆ ಏರಿಕೆ ನಿಯಂತ್ರಣ, ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲು ಜಾರಿಗೆ ಒತ್ತಾ ಯಿಸಿ ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಜೈಲ್‌ಭರೋ ಪ್ರತಿಭಟನೆ ನಡೆದಿದ್ದು, ಪೊಲೀಸರು ಪ್ರತಿ ಭಟನಾ ನಿರತ ಮಹಿಳೆಯರನ್ನು ಬಂಧಿಸಿದರು. ಜ್ಯೂಬಿಲಿ ಪಾರ್ಕ್‌ನಿಂದ ಹೆದ್ದಾರಿ ಮೂಲಕ ಮೆರವಣಿಗೆಯಲ್ಲಿ ತೆರಳಿದ ಮಹಿಳೆಯರು ಬಸ್ ನಿಲ್ದಾಣಬಳಿಯ ವೃತ್ತದಲ್ಲಿ ಕೆಲಹೊತ್ತು ರಸ್ತೆ ತಡೆ ನಡೆಸಿ, ತಮ್ಮ ಹಕ್ಕುಗಳನ್ನು ಈಡೇರಿ ಸಲು ಒತ್ತಾಯಿಸುವ ಘೋಷಣೆ ಗಳನ್ನು ಕೂಗಿದರು. ಬಂಧಿತರನ್ನು ಬಳಿಕ ಬಿಡುಗಡೆ ಮಾಡಲಾಯಿತು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಸುಮಾರು ಅರ್ಧ ಗಂಟೆಕಾಲ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತ್ಯವ್ಯಸ್ತಗೊಂಡಿತು. ಒಂದು ಹಂತ ದಲ್ಲಿ ಪ್ರತಿಭಟನಾಕಾರರನ್ನು ಮನ ವೊಲಿಸಲು ವಿಫಲರಾದ ಪೊಲೀಸರು ಅಂತಿಮವಾಗಿ ಅವರನ್ನು ಬಂಧಿಸಿ, ಮೂರು ಬಸ್‌ಗಳಲ್ಲಿ ಕರೆದೊಯ್ದರು. ಪ್ರತಿಭಟನೆಯ ನೇತೃತ್ವವನ್ನು ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ದೇವಿ, ಪ್ರತಿನಿಧಿಗಳಾದ ಸುನೀತಾ, ಶೈಲಜಹಾ, ಪದ್ಮಾ, ಶೋಭಾ, ಪ್ರೇಮಕುಮಾರಿ ಮತ್ತಿತರರು ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ದೇವಿ, ಮಹಿಳಾ ಮೀಸಲಾತಿ ಮಸೂ ದೆಗೆ ಎಪಿ, ಬಿಜೆಪಿ, ಟಿಎಂಸಿ ಪಕ್ಷಗಳು ಅಡ್ಡಿ ಪಡಿಸುತ್ತಿವೆ. ಇಂಥ ಹುನ್ನಾರ ವನ್ನು ವಿರೋಧಿಸಬೇಕಾಗಿದೆ ಎಂದರು. ಈ ಬಗೆಗೆ ಸರ್ಕಾರದ ಗಮನ ಸೆಳೆಯಲು ಜೈಲ್‌ಭರೋ ಚಳವಳಿ ಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಅವೈಜ್ಞಾನಿಕವಾದ ಎಪಿಎಲ್ ಮತ್ತು ಬಿಪಿಎಲ್ ಮಾನದಂಡವನ್ನು ಕೈಬಿಟ್ಟು, ಪಡಿತರ ವಿತರಣೆ ವ್ಯವಸ್ಥೆ ಯನ್ನು ಸಾರ್ವತ್ರೀಕರಣ ಗೊಳಿಸ ಬೇಕು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ರೂಪಿಸಬೇಕು; ಉದ್ಯೋಗ ಖಾತರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು, ಅಸಂಘಟಿತ ಕಾರ್ಮಿಕರಿಗೆ ಗ್ರಾಮಾ ಂತರದಲ್ಲಿ ಕನಿಷ್ಠ 6,000 ಮತ್ತು ನಗರ ಪ್ರದೇಶದಲ್ಲಿ ಕನಿಷ್ಠ 10,000 ಕೂಲಿ ನೀಡಬೇಕು.
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಬೇಕು, ಈ ಮಸೂದೆಯ ಮಂಡಿಸುವ ಮೂಲಕ ಮಹಿಳಾ ಸಬಲೀಕರಣ ಗೊಳಿಸುವ ಇಚ್ಛಾ ಶಕ್ತಿಯನ್ನು ರಾಜ ಕೀಯ ಪಕ್ಷಗಳು ತೋರಬೇಕು ಎಂಬುದು ಸೇರಿ12 ಬೇಡಿಕೆಗಳ ಈಡೇ ರಿಕೆಗೆ ಆಗ್ರಹಿಸಿ ಪ್ರತಿಭಟಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾ ಧಿಕಾರಿ ರಾಜಣ್ಣ, ಡಿವೈಎಸ್‌ಪಿ ಚನ್ನಬಸವಣ್ಣ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಬಂದೋ ಬಸ್ತ್ ಕಾರ್ಯದಲ್ಲಿ ನಿರತರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.