ADVERTISEMENT

ತಂಬಾಕು ಸೇವನೆ: ಜಾಗೃತರಾಗಲು ಸಲಹೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 10:40 IST
Last Updated 1 ಜೂನ್ 2011, 10:40 IST

ಮಂಡ್ಯ: ತಂಬಾಕು ಸೇವನೆಯು ದೇಹದ ಪ್ರತಿ ಅಂಗದ ಮೇಲೂ ನಕಾರಾತ್ಮಕ ಪರಿಣಾಮ ಬೀರಲಿದ್ದು, ಕ್ಯಾನ್ಸರ್‌ಗೆ ಶೇ 90ರಷ್ಟು ಕಾರಣವಾಗಲಿದೆ ಎಂಬ ಹಿನ್ನೆಲೆಯಲ್ಲಿ ಧೂಮಪಾನ, ತಂಬಾಕು ಸೇವನೆ ಕುರಿತು ಜಾಗೃತರಾಗಬೇಕು ಎಂದು ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ಎಂ.ವಿನಯ್ ಅಭಿಪ್ರಾಯಪಟ್ಟರು.

ಆರೋಗ್ಯ ಇಲಾಖೆಯು ಮಂಡ್ಯ ಉಪ ಕಾರಾಗೃಹದಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ದಿನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ತಂಬಾಕು  ಸೇವನೆಯನ್ನು ಚಟವಾಗಿಸಿಕೊಂಡ ವ್ಯಕ್ತಿ ಆರೋಗ್ಯಕರವಾಗಿ ಇರುವ ಒಂದೂ ನಿದರ್ಶನ ಸಿಗುವುದಿಲ್ಲ. ಇದರ ಅಪಾಯದ ಅರಿವು ಇದ್ದರೂಹೆಚ್ಚಿನವರು ಇದರಿಂದ ಮುಕ್ತರಾಗಲು ಬಯಸು ವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಆರೋಗ್ಯ ಇಲಾಖೆಯ ಡಾ. ಹರ್ಷವರ್ಧನ್ ಅವರು, ನೀತಿ ನಿರೂಪಕರು ತಂಬಾಕು ಉತ್ಪನ್ನಗಳುನ್ನು ನಿರ್ಬಂಧಿಸುವ ಬಗೆಗೆ ಚಿಂತನೆ ಮಾಡಿದರೂ, ಆನ್‌ಲೈನ್ ಲಾಟರಿ ನಿಷೇದದಿಂದ ಆದ ಅನುಕೂಲಕ್ಕಿಂತಲೂ ಹೆಚ್ಚಿನ ಅನುಕೂಲ ತಂಬಾಕು ನಿರ್ಬಂಧ ದಿಂದ ಅಗಲಿದೆ ಎಂದರು.

ವಾರ್ತಾಧಿಕಾರಿ ರಾಜು ಕಾರ್ಯಕ್ರಮ ಉದ್ಘಾಟಿಸಿದರ. ಕೇಂದ್ರ ಸಂಗೀತ, ನಾಟಕ  ವಿಭಾಗ ಮತ್ತು ನೆಹರು ಯುವ ಕೇಂದ್ರದ ಸಹಯೋಗದಲ್ಲಿ ರಾಗರಂಜಿನಿ ಕಲಾ ತಂಡದ ಸದಸ್ಯರು ತಂಬಾಕು ವಿರೋಧಿ ಜಾಗೃತಿ ಗೀತೆ ಹಾಗೂ ಬೀದಿ ನಾಟಕವನ್ನು ಪ್ರಸ್ತುತ ಪಡಿಸಿದರು.

ಜಿಲ್ಲಾ ಉಪ ಕಾರಾಗೃಹದ ಅಧೀಕ್ಷಕರಾದ ಎಂ.ಸುಂದರ್, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಎಸ್.ಸಿದ್ದರಾಮಪ್ಪ, ಜ್ಲ್ಲಿಲಾ ಲೋಕ ಶಿಕ್ಷಣಾಧಿಕಾರಿ ಕೆ.ಕಾಳೇಗೌಡ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ನರಸಿಂಹಸ್ವಾಮಿ, ಡಾ. ಸಿ.ಎಂ.ಶ್ರೀಧರ್ ಮತ್ತಿತರರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.