ADVERTISEMENT

`ಪರಿಸರ ರಕ್ಷಣೆ, ಎಲ್ಲರ ಹೊಣೆ'

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 6:53 IST
Last Updated 2 ಜುಲೈ 2013, 6:53 IST

ಪಾಂಡವಪುರ: ಮಾನವ ತನ್ನ ಮಿತಿ ಮೀರಿದ ದುರಾಸೆಯ ಚಟುವಟಿಕೆಗಳಿಂದ ನೆಲ, ಜಲ, ಗಾಳಿಯನ್ನು ಕಲುಷಿತಗೊಳಿಸುತ್ತಿರುವುದರಿಂದ ಅವನೇ ಅನೇಕ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾದ ಪರಿಸ್ಥಿತಿ ಇದೆ ಎಂದು ಅಮೆಚೂರ್ ನ್ಯಾಚುರಲಿಸ್ಟ್ ಮನು ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಆವರಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಪರಿಸರ ಜಾಗೃತಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಜೀವಿ ವೈವಿದ್ಯ ಸಂರಕ್ಷಣೆ ಕುರಿತು ಅವರು ಮಾತನಾಡಿದರು.

ಜಲಚರ ಪ್ರಾಣಿಗಳ ಮೇಲೆ ಮಾನವ  ಯಾವುದೇ ಅಡೆತಡೆಯಿಲ್ಲದೆ ದಾಳಿ ನಡೆಸುತ್ತಿರುವುದರಿಂದ  ಅನೇಕ ಜಲಚರ ಪ್ರಾಣಿಗಳು ತಮ್ಮ ಅಸ್ತಿತ್ವ ಕಳೆದುಕೊಂಡು ಅವುಗಳ ಸಂತತಿಯೇ ನಾಶವಾಗುತ್ತಿದೆ.

ಬಿಇಒ ಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಕೆ. ಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಧನಂಜಯ, ಪ್ರಾದೇಶಿಕ ಅರಣ್ಯಾಧಿಕಾರಿ ಅನಂತಸ್ವಾಮಿ, ಶಿಕ್ಷಣ ಸಂಯೋಜಕರಾದ ಡಾ.ಪ್ರತಿಮಾ, ಪುರುಷೋತ್ತಮಚಾರಿ, ಬಿಆರ್‌ಪಿ ಮಹದೇವಪ್ಪ, ಎಚ್.ಎನ್. ಮಂಜುನಾಥ್, ಲೇಖಕ ಹರವು ದೇವೇಗೌಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.