ADVERTISEMENT

ಬರ ಕಾಮಗಾರಿ: ಯೋಗೇಶ್ವರ್ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2012, 4:20 IST
Last Updated 23 ಜುಲೈ 2012, 4:20 IST

ಮಂಡ್ಯ: ಜಿಲ್ಲೆಯಲ್ಲಿ ಬರ ಕಾಮಗಾರಿ ಗಳು ಸಮರ್ಪಕವಾಗಿ ಆಗಿಲ್ಲ ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ. ಯೋಗೇಶ್ವರ್ ಅಸಮ ಧಾನ ವ್ಯಕ್ತಪಡಿಸಿದರು. ಇದಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮರ್ ನಾರಾಯಣ ಧ್ವನಿಗೂಡಿಸಿದರು.

ಜಿಲ್ಲೆಯ ವೆುೀಲುಕೋಟೆಯಲ್ಲಿ ಭಾನುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಕಾಮಗಾರಿಗಳನ್ನು ತೀವ್ರಗತಿ ಯಲ್ಲಿ ಪೂರ್ಣಗೊಳಿಸಬೇಕು ಎಂದ ಸಚಿವರು ಸೂಚಿಸಿದರು.

ಶಾಸಕ ಸುರೇಶಗೌಡ ಮಾತನಾಡಿ, ಬರ ಕಾಮಗಾರಿಯ ಹಣ ಖರ್ಚು ಮಾಡದ್ದರಿಂದ ಜಿಲ್ಲೆಗೆ ಹೊಸದಾಗಿ ಹಣ ಬಿಡಗಡೆಯಾಗುತ್ತಿಲ್ಲ. ಸರ್ಕಾರ ಮಟ್ಟ ದಲ್ಲಿ ಹಣ ಕೇಳಿದರೆ, ಮೊದಲು ಕೊಟ್ಟಿರುವ ಹಣವನ್ನು ಖರ್ಚು ಮಾಡಿ ಎನ್ನುತ್ತಾರೆ ಎಂದು ದೂರಿದರು.

ವಿಧಾನ ಪರಿಷತ್ ಸದಸ್ಯ ಅಶ್ವತ್ಥ ನಾರಾಯಣ್ ಮಾತನಾಡಿ, ಸರ್ಕಾರ ಹಣ ಬಿಡುಗಡೆ ಮಾಡಿದೆ. ಆದರೆ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ. ಆದ್ದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದರು.

ಶಾಸಕ ಸಿ.ಎಸ್. ಪುಟ್ಟರಾಜು ಮಾತನಾಡಿ, ಬಿಡಗಡೆ ಮಾಡಿರುವ ಅನುದಾನ ಬಳಕೆಯಲ್ಲಿ ಜಿಲ್ಲೆ ಹಿಂದೆ ಬಿದ್ದಿದೆ ಎಂದು ದೂರಿದರು.

ಕಾಮಗಾರಿಗಳು ಪೂರ್ಣ ಗೊಂಡಿಲ್ಲವೇ? ಅನುದಾನ ಯಾಕೆ ಖರ್ಚಾಗಿಲ್ಲ ಎಂದು ಸಚಿವ ಸಿ.ಪಿ. ಯೋಗೇಶ್ವರ್ ಪ್ರಶ್ನಿಸಿದರು.

ಕಾಮಗಾರಿ ಪೂರ್ಣಗೊಂಡಿವೆ. ಆದರೆ ಥರ್ಡ್ ಪಾರ್ಟಿ ಇನ್‌ಸ್ಪೆಕ್ಷನ್ ಆಗದ್ದರಿಂದ ಹಣ ಬಿಡುಗಡೆ ಮಾಡಿಲ್ಲ ಎಂದು ಪಂಚಾಯಿತಿ ರಾಜ್ ಎಂಜಿನಿ ಯರ್ ಚನ್ನಯ್ಯ ಹೇಳಿದರು.

ನೋಡಲ್ ಅಧಿಕಾರಿಗಳನ್ನು ನೇಮಿಸ ಲಾಗಿದೆ. ಅವರ ವರದಿ ಆಧಾರದ ಮೇಲೆ ಹಣ ಬಿಡುಗಡೆ ಮಾಡ ಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಹೇಳಿದರು.

ಅಧಿಕಾರಿಗಳಿಗೆ ತಾಂತ್ರಿಕ ಜ್ಞಾನ ಇರುವುದಿಲ್ಲ. ತಾಂತ್ರಿಕ ಕಾಲೇಜ್‌ಗಳಿಗೆ ಈ ಕಾರ್ಯ ವಹಿಸಲು ಸೂಚಿಸಲಾಗಿದೆ. ಸರ್ಕಾರ ನಿರ್ದೇಶನಕ್ಕೆ ವ್ಯತಿರಿಕ್ತವಾಗಿ ಕೆಲಸ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮರ್ ನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು.

ಈ ಹಂತದಲ್ಲಿ ಸರ್ಕಾರವು, ಅಧಿಕಾರಿಗಳನ್ನು ನೇಮಿಸಬೇಕು ಎಂದು ಸೂಚಿಸಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಸಿ. ಜಯಣ್ಣ ಹೇಳಿದರು. ಸರ್ಕಾರ ಹಾಗೆ ಸೂಚಿಸಿಲ್ಲ ಎಂದು ಕಾರ್ಯದರ್ಶಿ ತಿಳಿಸಿದರು.

ಪ್ರತಿ ತಾಲ್ಲೂಕಿಗೆ ಒಂದು ಕೋಟಿ ಯಂತೆ ಜಿಲ್ಲೆಗೆ 7 ಕೋಟಿ ರೂಪಾಯಿ ಬಿಡುಗಡೆ ಆಗಿದೆ. ಸರ್ಕಾರದ ನಿರ್ದೇ ಶನದಂತೆ ಕಾರ್ಯ ನಿರ್ವಹಿಸ ಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಬರ ನಿರ್ವಹಣೆಯಲ್ಲಿ ತಹಶೀಲ್ದಾರ ರ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳ ಪಾತ್ರ ಬಹಳ ಮುಖ್ಯ. ಅವರು ಜವಾ ಬ್ದಾರಿಯಿಂದ ವರ್ತಿಸಬೇಕು. ಇಲ್ಲದಿದ್ದರೆ ಅವರನ್ನೇ ಹೊಣೆಗಾರ ರನ್ನಾಗಿ ಮಾಡಲಾಗುವುದು ಎಚ್ಚರಿ ಸಿದರು. ಶೀಘ್ರದಲ್ಲಿಯೇ ತಾಲ್ಲೂಕು ವಾರು ಪರಿಶೀಲನೆ ನಡೆಸಿ ದರು.

ಮೈಷುಗರ್ ಅಧ್ಯಕ್ಷ ನಾಗ ರಾಜಪ್ಪ, ಮುಡಾ ಅಧ್ಯಕ್ಷ ಬಸವೇಗೌಡ, ಕಾಡಾ ಅಧ್ಯಕ್ಷ ರಾಮಲಿಂಗಯ್ಯ ಮತ್ತಿತರರು ಪಾಲ್ಗೊಂಡಿದ್ದರು.c

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.