ಕೃಷ್ಣರಾಜಪೇಟೆ: ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುತ್ತಿದ್ದ ಪಟ್ಟಣದ ಹಣಕಾಸು ಸಂಸ್ಥೆಯ ಕಚೇರಿ ಬಾಗಿಲು ಕಳೆದ ಕೆಲವು ದಿನಗಳಿಂದ ಮುಚ್ಚ ಲಾಗಿದ್ದು, ಠೇವಣಿ ಇಟ್ಟವರಲ್ಲಿ ಆತಂಕ ಮೂಡಿಸಿದೆ.
ಸ್ವಯಂಕೃಷಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ ಹೆಸರಿನ ಈ ಸಂಸ್ಥೆ ಪಟ್ಟಣದ ಕಿಕ್ಕೇರಿ ರಸ್ತೆಯಲ್ಲಿ ತನ್ನ ಕಚೇರಿ ಹೊಂದಿದೆ. ಏಜೆಂಟರ ಮೂಲಕ ಸಾರ್ವಜನಿಕರಿಂದ ದೈನಂದಿನ ಪಿಗ್ಮಿ ಸಂಗ್ರಹಿಸುತ್ತಿತ್ತು. ನೂರಕ್ಕೂ ಹೆಚ್ಚು ಪುರುಷ ಮತ್ತು ಮಹಿಳೆಯರು ಪಿಗ್ಮಿ ಸಂಗ್ರಹಕಾರರು ಇಲ್ಲಿ ಕೆಲಸ ಮಾಡುತ್ತಿದ್ದರು.
ದಿನಗೂಲಿ ಕಾರ್ಮಿ ಕರು, ಸಣ್ಣಪುಟ್ಟ ವ್ಯಾಪಾರಿಗಳು, ಖಾಸಗಿ ಸಂಸ್ಥೆಗಳ ನೌಕರರು ಸೇರಿದಂತೆ ವಿವಿಧ ವರ್ಗದ ಜನರು ಈ ಸಂಸ್ಥೆಗೆ ದಿನನಿತ್ಯ ಠೇವಣಿ ಕಟ್ಟುತ್ತಿದ್ದರು. ಆದರೆ ಒಂದು ವಾರದಿಂದ ಸಂಸ್ಥೆಯ ಬಾಗಿಲು ಮುಚ್ಚಿರುವುದಿಂದ ಸಂಸ್ಥೆ ನಮಗೆ ಮೋಸ ಮಾಡಿದೆ ಎಂದೇ ಸಾರ್ವಜನಿಕರು ಭಾವಿಸಿದ್ದಾರೆ.
ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಠೇವಣಿ ಸಂಗ್ರಹಕಾರರು ತಮ್ಮ ಮೊಬೈಲ್ ಸ್ಥಗಿತಗೊಳಿಸಿದ್ದಾರೆ. ಇದು ಠೇವಣಿದಾರರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಪ್ರತಿದಿನದ ಶ್ರಮದ ಒಂದು ಪಾಲನ್ನು ತಮ್ಮ ಕುಟುಂಬದ ಭವಿಷ್ಯಕ್ಕಾಗಿ ಸಂಸ್ಥೆಯಲ್ಲಿ ಉಳಿತಾಯ ಮಾಡಿದ್ದ ಜನರು ದಾರಿ ತಿಳಿಯದೆ ಕಂಗಾಲಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.