ADVERTISEMENT

ಭಾಷ್ಯಂ ಸ್ವಾಮೀಜಿ ನೇಮಕ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2017, 9:54 IST
Last Updated 11 ಡಿಸೆಂಬರ್ 2017, 9:54 IST
ಭಾಷ್ಯಂ ಸ್ವಾಮೀಜಿ
ಭಾಷ್ಯಂ ಸ್ವಾಮೀಜಿ   

ಮೇಲುಕೋಟೆ: ಇಲ್ಲಿನ ಯೋಗನರ ಸಿಂಹಸ್ವಾಮಿ ಬೆಟ್ಟದಲ್ಲಿ ಅರ್ಚಕರ ಅನುಪಸ್ಥಿಯಲ್ಲಿ ಕರ್ತವ್ಯ ನಿರ್ವಹಿಸಲು ಮೈಸೂರಿನ ಡಾ.ಭಾಷ್ಯಂ ಸ್ವಾಮೀಜಿ ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ.

ಯೋಗನರಸಿಂಹಸ್ವಾಮಿ ದೇವಾಲ ಯದಲ್ಲಿ ಸರ್ಕಾರಿ ಬದಲಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕ ಎಸ್.ನಾರಾಯಣ ಭಟ್ಟರ್ ಅವರ ಅನುಪಸ್ಥಿತಿಯಲ್ಲಿ ಡಾ.ಭಾಷ್ಯಂ ಸ್ವಾಮೀಜಿ ಅವರು ಪೂಜಾಕೈಂಕರ್ಯ ಮಾಡಲು ಅವಕಾಶ ನೀಡಲಾಗಿದೆ. ಈ ಆದೇಶ ನ.11ರಂದೇ ಹೊರಡಿಸಲಾಗಿದೆ. ಆದರೆ ಇನ್ನೂ ಜಾರಿಯಾಗಿಲ್ಲ.

ನಾರಾಯಣಭಟ್ ಅನುಪಸ್ಥಿಯಲ್ಲಿ ಸಂಬಂಧಿಕರು ಕರ್ತವ್ಯ ಮಾಡುತ್ತಿದ್ದರು. ಈ ಆದೇಶ ಜಾರಿಯಾದರೆ ಅರ್ಚಕ ನಾರಾಯಣಭಟ್ ಖುದ್ದಾಗಿ ಕರ್ತವ್ಯ ನಿರ್ವಹಿಸಬೇಕಿದ್ದು, ಸಹಾಯಕರ ಹಾಗೂ ಸಂಬಂಧಿಕರ ಸಹಾಯ ಪಡೆಯಲು ಅವಕಾಶವಿರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.