ಮಂಡ್ಯ: ನಿತ್ಯ ಸಚಿವ ದಿ. ಕೆ.ವಿ. ಶಂಕರಗೌಡ ಅವರ ಸ್ಮರಣಾರ್ಥ 9ನೇ ವರ್ಷದ ರಾಜ್ಯ ಮಟ್ಟದ ನಾಟಕೋ ತ್ಸವವನ್ನು ಮಾ. 2 ರಿಂದ 7ರವರೆಗೆ ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟ ದಲ್ಲಿ ಪ್ರಕಾಶ್ ಕಲಾ ಸಂಘ ಆಯೋಜಿಸಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಸಂಘದ ಉಪಾಧ್ಯಕ್ಷ ಶಿವನಂಜು, ‘ಆಯ್ದ ತಂಡಗಳನ್ನು ನಾಟಕೋತ್ಸವಕ್ಕೆ ಆಹ್ವಾನಿಸಿದ್ದು, ಪೌರಾಣಿಕ, ಸಾಮಾ ಜಿಕ ಮತ್ತು ಐತಿಹಾಸಿಕ ಹಿನ್ನೆಲೆ ಕುರಿತ ನಾಟಕಗಳ ಪ್ರದರ್ಶನ ನಡೆಯಲಿದೆ’ ಎಂದು ಹೇಳಿದರು.
ನಾಟಕೋತ್ಸವದಲ್ಲಿ ವಿಜೇತ ವಾಗುವ ತಂಡಗಳಿಗೆ ನಗದು ಬಹು ಮಾನ ಮತ್ತು ಪ್ರದರ್ಶನ ನೀಡುವ ಎಲ್ಲ ತಂಡಗಳಿಗೂ ಪ್ರೋತ್ಸಾಹ ಧನವಾಗಿ ತಲಾ 8 ಸಾವಿರ ರೂ. ನೀಡ ಲಾಗುವುದು. ಪ್ರತಿದಿನ ಸಂಜೆ 6ಕ್ಕೆ ಎರಡು ನಾಟಕಗಳ ಪ್ರದರ್ಶನ ಇರುತ್ತದೆ ಎಂದರು. ಮಾ. 2ರಂದು ಸಂಜೆ 6ಕ್ಕೆ ನಾಟಕೋತ್ಸವವನ್ನು ಬೇಬಿ ಮಠದ ಸದಾಶಿವಸ್ವಾಮೀಜಿ ಅವರು ಉದ್ಘಾ ಟಿಸಲಿದ್ದಾರೆ. ಶಾಸಕ ಸಿ.ಎಸ್.ಪುಟ್ಟ ರಾಜು ಅವರು ಅಧ್ಯಕ್ಷತೆ ವಹಿಸಲಿದ್ದು, ಕಸಾಪ ಜಿಲ್ಲಾ ಅಧ್ಯಕ್ಷ ಡಾ. ಎಚ್.ಎಸ್.ಮುದ್ದೇಗೌಡರು ಪ್ರಾಸ್ತಾ ವಿಕವಾಗಿ ಮಾತನಾಡಲಿದ್ದಾರೆ ಎಂದು ಹೇಳಿದರು. ಪದಾಧಿಕಾರಿಗಳಾದ ಪಿ.ವೆಂಕಟ ರಾಮಯ್ಯ, ಕೆ.ಟಿ.ಶಂಕರೇಗೌಡ ಮತ್ತು ಎಂ.ಎಸ್.ಚಿದಂಬರ್ ಹಾಜರಿದ್ದರು.
ಎಂದು, ಯಾವುದು?: ಮಾ. 2ರಂದು ವೀರಸಂಕಲ್ಪ(ಮೈಸೂರು ರಸರಂಗ ತಂಡ) ಮತ್ತು ಆಹುತಿ (ಕೂಡ್ಡಿ ಕಲಾವಿದರ್ ಪೆರ್ಡೂರು, ಉಡುಪಿ); 3 ರಂದು ಭೂ ಕೈಲಾಸ (ಸತ್ಯಗಣಪತಿ ತಂಡ, ತುರುವೇಕೆರೆ), ಪಾದುಕಾ ಪಟ್ಟಾಭಿಷೇಕ (ಮಾಂಡವ್ಯ ರಂಗಕಲಾ ಸಂಘ, ಮಂಡ್ಯ). 4ರಂದು ಶ್ರೀಕೃಷ್ಣ ಸಂಧಾನ (ಡಾ.ರಾಜ್ ಕಲಾ ಬಳಗ, ಚನ್ನಪಟ್ಟಣ), ಟಿಪ್ಪು ಸುಲ್ತಾನ್ (ನಂಜುಂಡೇಶ್ವರ ಕನ್ನಡ ಕಲಾ ಸಂಘ, ಮೈಸೂರು); 5ರಂದು ಚಂದ್ರಮನ ಶಾಪ ವಿಮೋಚನೆ (ಬಾಲಚಂದ್ರ ಮಿತ್ರ ಮಂಡಳಿ, ಮೈಸೂರು), ಭಕ್ತ ಕನಕದಾಸ (ರಾಘವೇಂದ್ರ ಮಿತ್ರ ಮಂಡಳಿ, ಮೈಸೂರು). 6ರಂದು ಶ್ರೀಕೃಷ್ಣ ಸಂಧಾನ (ನವೋದಯ ಕಲಾಸಂಘ, ಭದ್ರಾ ವತಿ), ಕರ್ನಾಟಕ ರಾಮಾಯಣ (ಶ್ರೀರಂಗ ಕಲಾವಿದರು, ಮೈಸೂರು); 7ರಂದು ವಾಲಿ (ನಮ ತುಳುವೇರ್ ಕಲಾ ಸಂಘ, ಮುದ್ರಾಡಿ), ಶ್ರೀ ಕೃಷ್ಣ ವಿಜಯ (ಗಂಗಾಧರೇಶ್ವರ ಕಲಾ ಸಂಘ, ಬೆಂಗಳೂರು).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.