ADVERTISEMENT

ರಸಗೊಬ್ಬರ ಅಭಾವವಾಗದಂತೆ ಎಚ್ಚರವಹಿಸಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 10:35 IST
Last Updated 1 ಜೂನ್ 2011, 10:35 IST

ಮದ್ದೂರು: ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ತಾಲ್ಲೂಕಿನಲ್ಲಿ ಅಭಾವ ಉಂಟಾಗದಂತೆ ಎಚ್ಚರ ವಹಿಸಬೇಕೆಂದು ಮಂಗಳವಾರ ಇಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಕ್ಕೊರಲಿನಲ್ಲಿ ಆಗ್ರಹಿಸಿದ ಘಟನೆ ನಡೆಯಿತು.

ಇಲ್ಲಿನ ತಾಪಂ ಸಭಾಂಗಣದಲ್ಲಿ ಅಧ್ಯಕ್ಷೆ ಬೋರಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಬಿಳಿಗೌಡ, ಕಳೆದ ಬಾರಿ ರೈತರಿಗೆ ಆದ ತೊಂದರೆಯಂತೆ ಈ ಬಾರಿ ಆಗುವುದು ಬೇಡ ಎಂದು ಸಲಹೆ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ತಾಂತ್ರಿಕ ಅಧಿಕಾರಿ, ಈ ಮುಂಗಾರು ಹಂಗಾಮಿಗೆ ಒಟ್ಟು 4500 ಕ್ವಿಂಟಲ್ ಬತ್ತದ ಬಿತ್ತನೆ ಬೀಜವನ್ನು ಈಗಾಗಲೇ ದಾಸ್ತಾನು ಮಾಡಲಾಗಿದೆ.

ಕೃಷಿ ಸಂಪರ್ಕ ಕೇಂದ್ರ ವಲ್ಲದೇ ಎಲ್ಲ ಸಹಕಾರ ಸಂಘಗಳ ಮೂಲಕ ಬಿತ್ತನೆ ಬೀಜ ವಿತರಿಸಲು ಯೋಜಿಸಲಾಗಿದೆ ಎಂದು ಹೇಳಿದ ಅವರು, ಇದಕ್ಕನು ಗುಣವಾಗಿ ಅಗತ್ಯ ವಿರುವ ರಸಗೊಬ್ಬರ ದಾಸ್ತಾನು ಮಾಡಲು ಇಲಾಖೆ ಕ್ರಮ ಕೈಗೊಂಡಿದೆ ಎಂದರು. ಸಹಕಾರ ಅಭಿವೃದ್ಧಿ ಅಧಿಕಾರಿ ಕೃಷ್ಣ ಶೆಟ್ಟಿ ಮಾತನಾಡಿ, ಈ ಬಾರಿ ತಾಲ್ಲೂಕಿ ನಲ್ಲಿ ಒಟ್ಟು 58,100 ಮಂದಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಗೆ ಹೆಸರು ನೋಂದಾಯಿಸಿದ್ದಾರೆ. ಕಳೆದ ಬಾರಿ ರೂ.2ಕೋಟಿಗೂ  ಹೆಚ್ಚು ವೈದ್ಯಕೀಯ ಸವಲತ್ತುಗಳು ವಿಮಾ ನೊಂದಾಯಿತ ರಿಗೆ ದೊರಕಿದೆ. ಈ ಬಾರಿಯೂ ಹೆಚ್ಚಿನ ಸವಲತ್ತು ದೊರಕಿಸಲು ಯತ್ನಿಸುವು ದಾಗಿ ಅವರು ಸಭೆಗೆ ಭರವಸೆಯಿತ್ತರು.

ತಾಲ್ಲೂಕಿನ ವಿವಿಧ ಆಸ್ಪತ್ರೆಗಳಲ್ಲಿ 12 ಮಂದಿ ವೈದ್ಯರನ್ನು ಹೆಚ್ಚುವರಿ ಎಂದು ಗುರುತಿಸಿ ವರ್ಗಾವಣೆ ಮಾಡಿರುವು ದನ್ನು ಖಂಡಿಸಿದ ಸದಸ್ಯರಾದ ರಾಜೀವ್, ಸುನಂದ, ರಾಮಚಂದ್ರ ಅವರುಗಳು, ಕೂಡಲೇ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು, ಆ ವೈದ್ಯ ಹುದ್ದೆಗಳನ್ನು ಪುನರ್ ಮಂಜೂರು ಮಾಡಿಸಲು ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿ ದರು. ಇದಕ್ಕೆ ಸರ್ವ ಸದಸ್ಯರು ಒಮ್ಮತದ ಒಪ್ಪಿಗೆ ಸೂಚಿಸಿದರು. 

 ವಿವಿಧ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಯಿತು. ಉಪಾಧ್ಯಕ್ಷ ಸಿದ್ದಪ್ಪ, ಸದಸ್ಯರಾದ ಕೆ.ಆರ್.ಮಹೇಶ್, ಎಚ್.ಆರ್.ಗಂಗಾ, ಶೋಭ, ನಾಗ ರತ್ನಮ್ಮ, ವೈ.ಬಿ.ಮಮತಾ, ಇಂದ್ರಾಣಿ, ಲಲಿತಮ್ಮ, ನೀಲಮ್ಮ, ಜ್ಯೋತಿ, ಪ್ರಕಾಶ್, ಪುಟ್ಟಸ್ವಾಮಿ, ಕೆ.ಎಂ. ಧನಂಜಯ  ಇತರ ವಿವಿಧ ಇಲಾಖಾ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.