ADVERTISEMENT

ವಯಸ್ಸಿನ ಅಂತರ ಮರೆಸಿದ ದಸರಾ ಓಟ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 5:20 IST
Last Updated 22 ಅಕ್ಟೋಬರ್ 2012, 5:20 IST

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ದಸರಾ ಉತ್ಸವದ ಎರಡನೇ ದಿನವಾದ ಭಾನುವಾರ ಬೆಳಿಗ್ಗೆ ದಸರಾ ಓಟದ ಸಂಭ್ರಮ ಕಳೆಗಟ್ಟಿತ್ತು. ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಆವರಣದಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ 3 ವರ್ಷದ ಪುಟಾಣಿಗಳಿಂದ 80 ವರ್ಷದ ಹಿರಿಯ ನಾಗರಿಕರು ಓಟದ ಸಂಭ್ರಮದಲ್ಲಿ ಪಾಲ್ಗೊಂಡರು.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ರಕ್ಷಿತಾ- ಪ್ರಥಮ, ಸ್ನೇಹ- ದ್ವಿತೀಯ, ರಾಜಲಕ್ಷ್ಮಿ- ತೃತೀಯ ಸ್ಥಾನ ಪಡೆದರು. ಬಾಲಕರ ವಿಭಾಗದಲ್ಲಿ ಸಂತೋಷ್, ಶಿವಪ್ರಕಾಶ್ ಹಾಗೂ ಸುಮನ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು. ಪ್ರೌಢಶಾಲಾ ವಿಭಾಗದ ಬಾಲಕಿಯರ ಸ್ಪರ್ಧೆಯಲ್ಲಿ ಪ್ರಫುಲ್ಲ- ಪ್ರಥಮ, ಸಹನಾ- ದ್ವಿತೀಯ ಹಾಗೂ ಸುಶ್ಮಿತಾ ಮೂರನೇ ಸ್ಥಾನ ಗಳಿಸಿದರು.

ಬಾಲಕರ ವಿಭಾಗದಲ್ಲಿ ಸಂಜಯ್- ಪ್ರಥಮ, ಶರತ್‌ಗೌಡ- ದ್ವಿತೀಯ ಹಾಗೂ ಹೊಯ್ಸಳ ತೃತೀಯ ಬಹುಮಾನ ಪಡೆದರು. 18ರಿಂದ 35 ವರ್ಷದವರ ಮಹಿಳೆಯರ ಓಟದ ಸ್ಪರ್ಧೆಯಲ್ಲಿ ನೇತ್ರಾವತಿ- ಪ್ರಥಮ, ರಶ್ಮಿ- ದ್ವಿತೀಯ ಹಾಗೂ ಶಾಲಿನಿ- ತೃತೀಯ; ಪುರುಷರ ವಿಭಾಗದಲ್ಲಿ ಸಂಜು- ಪ್ರಥಮ, ದರ್ಶನ್- ದ್ವಿತೀಯ ಹಾಗೂ ಅಭಿತ್ ತೃತೀಯ ಸ್ಥಾನ ಗಳಿಸಿದರು.

35 ರಿಂದ 45 ವರ್ಷದವರ ಸ್ಪರ್ಧೆಯಲ್ಲಿ ಶೋಭಾ ಕುಮಾರಸ್ವಾಮಿ- ಪ್ರಥಮ, ಪ್ರತಿಮಾ- ದ್ವಿತೀಯ, ಉಷಾ- ತೃತೀಯ; ಪುರುಷರ ಸ್ಪರ್ಧೆಯಲ್ಲಿ ಮಹದೇವು- ಪ್ರಥಮ, ರಮೇಶ್-ದ್ವಿತೀಯ ಹಾಗೂ ರಾಜು ಮೂರನೇ ಸ್ಥಾನ ಪಡೆದರು. 45-60 ವರ್ಷದವರ ಸ್ಪರ್ಧೆಯಲ್ಲಿ ತಾರಾದೇವಿ- ಪ್ರಥಮ, ಜಯಮ್ಮ- ದ್ವಿತೀಯ, ಹೊನ್ನಮ್ಮ- ತೃತೀಯ; ಪುರುಷರ ವಿಭಾಗದಲ್ಲಿ ಶಿವಕುಮಾರ್- ಪ್ರಥಮ, ಅಪ್ಪಾಜಿ- ದ್ವಿತೀಯ ಹಾಗೂ ಉಮೇಶ್ ಮೂರನೇ ಸ್ಥಾನ ಗಳಿಸಿದರು.

ಹಿರಿಯ ನಾಗರಿಕ ವಿಭಾಗದಲ್ಲಿ ಸೋಮಣ್ಣ- ಪ್ರಥಮ, ಸೀತಾರಾಮು- ದ್ವಿತೀಯ, ವಿಜೇಂದ್ರು ತೃತೀಯ ಸ್ಥಾನ ಪಡೆದರು. ಅಂಗವಿಕಲರ ಸ್ಪರ್ಧೆಯಲ್ಲಿ ಅರುಣ್- ಪ್ರಥಮ, ಬಸವರಾಜು- ದ್ವಿತೀಯ ಹಾಗೂ ಮಂಜುನಾಥ್ ಮೂರನೇ ಸ್ಥಾನ ಪಡೆದರು. ಬಾಲ ಪ್ರತಿಭೆ ವಿಭಾಗದಲ್ಲಿ ಎಸ್.ಲೇಖನ -ಪ್ರಥಮ, ಅದಿತಿ- ದ್ವಿತೀಯ ಹಾಗೂ ಭಾರ್ಗವಿ- ತೃತೀಯ ಬಹುಮಾನ ಗಳಿಸಿದರು.

ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ದಸರಾ ಓಟಕ್ಕೆ ಚಾಲನೆ ನೀಡಿದರು. ಉಪ ವಿಭಾಗಾಧಿಕಾರಿ ಲತಾ, ತಹಶೀಲ್ದಾರ್ ಅರುಳ್‌ಕುಮಾರ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಮಂಜುಳಾ, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.