ADVERTISEMENT

ವಿಶಿಷ್ಟವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 10:00 IST
Last Updated 10 ಸೆಪ್ಟೆಂಬರ್ 2011, 10:00 IST
ವಿಶಿಷ್ಟವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ
ವಿಶಿಷ್ಟವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ   

ಮಳವಳ್ಳಿ: ತಾಲ್ಲೂಕಿನ ಶಿವನಸ ಮುದ್ರಂನ ಬಳಿಯಿರುವ ಮಲಿಕ್ಯಾತನಹಳ್ಳಿಯಲ್ಲಿ ಸ್ನೇಹ ಮಿಲನಮಿತ್ರ ಬಳಗದವತಿಯಿಂದ ಕೃತಕ ಪರಿಸರವನ್ನು ಸೃಷ್ಠಿಸಿ ಒಂದು ಕೈಯಲ್ಲಿ ಗದೆ, ಒಂದು ಕೈಯಲ್ಲಿ ಬೆಟ್ಟವನ್ನು ಹಿಡಿದು ನಿಂತಿರುವ ಗಣಪತಿಯನ್ನು ಪ್ರತಿಷ್ಠಾಪಿಸಿ ಶುಕ್ರವಾರ ಪೂಜಾ ಕಾರ್ಯಕ್ರಮ ನಡೆಸಿ ವಿಸರ್ಜನೆ ಮಾಡಲಾಯಿತು.
ಗಣೇಶನನ್ನು ಪ್ರತಿಷ್ಠಾಪಿಸಲು ಪ್ಲಾಸ್ಟಿಕ್ ಕವರ್‌ನಿಂದ ನೀಲಾಕಾಶದಂತೆ ಮಂಟಪ ಮಾಡಿ, ಗಣೇಶನ ಮುಂಭಾಗ ಆನೆ, ಜಿಂಕೆಯ ಪ್ರತಿಮೆಗಳನ್ನು ಇರಿಸಲಾಗಿತ್ತು. ಸುತ್ತಲೂ ಗರಿಕೆ ಹಾಗೂ ಸಣ್ಣ ಸಣ್ಣ ಗಿಡಗಳನ್ನು ಇರಿಸಿ ಹಸಿರುಪರಿಸರದ ನಡುವೆ ಗಣೇಶನನ್ನು ಪ್ರತಿಷ್ಠಾಪಿಸಿದ್ದು ವಿಶೇಷವಾಗಿದ್ದು ಇದೇ ಕಳೆದ 12 ವರ್ಷಗಳಿಂದಲೂ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.