ADVERTISEMENT

ವಿಶ್ವ ಕನ್ನಡ ತೇರು: ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2011, 10:15 IST
Last Updated 5 ಮಾರ್ಚ್ 2011, 10:15 IST

ಮಂಡ್ಯ: ವಿಶ್ವ ಕನ್ನಡ ಸಮ್ಮೇಳನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಆಯೋಜಿಸ ಲಿರುವ ‘ವಿಶ್ವ ಕನ್ನಡ ತೇರು’ ಕಾರ್ಯ ಕ್ರಮ ಭಾನುವಾರ (ಮಾ. 6) ಶಿವ ಪುರದ ಸತ್ಯಾಗ್ರಹ ಸೌಧದ ಬಳಿ ಆರಂಭವಾಗಲಿದೆ. 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ಜಿಲ್ಲೆಯವರೇ ಆಗಿರುವ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಉಪ ಸ್ಥಿತಿಯಲ್ಲಿ ಉಸ್ತುವಾರಿ ಸಚಿವ ಆರ್. ಅಶೋಕ್ ಉದ್ಘಾಟಿಸುವರು.

ಕನ್ನಡ ತೇರು ಅನ್ನು ಜಿಲ್ಲೆಯಾದ್ಯಂತ ಯಶಸ್ವಿಯಾಗಿ ಕೊಂಡೊಯ್ಯುವ ನಿಟ್ಟಿನಲ್ಲಿ ಸಿದ್ಧತೆಗಳನ್ನು ಕುರಿತು ಉಪ ವಿಭಾಗಾಧಿಕಾರಿ ರಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಗರದಲ್ಲಿ ಪೂರ್ವಭಾವಿ ಸಭೆಯು ನಡೆಯಿತು.ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರು ಹಾಜರಿದ್ದು ಕಾರ್ಯ ಕ್ರಮದ ಯಶಸ್ಸಿಗೆ ಸಲಹೆ ನೀಡಿದರು. ಜನಪದ ಕಲಾ ಪ್ರಕಾರಗಳ ಮುಂಚೂಣಿಯಲ್ಲಿ ತೇರು ಒಯ್ಯಬೇಕು ಎಂದು ಸಭೆ ತೀರ್ಮಾನಿಸಿತು.

ಮಾರ್ಗದುದ್ದಕ್ಕೂ ಆಯಾ ತಾಲ್ಲೂಕು ಪ್ರವೇಶಿಸುವ ಸಂದರ್ಭದಲ್ಲಿ ಜನ ಪ್ರತಿನಿಧಿಗಳು, ಸ್ಥಳೀಯ ಮುಖಂಡರು ಹಾಜರಿದ್ದು ಬರ ಮಾಡಿಕೊಳ್ಳಲು, ಸಮಾರಂಭ ಆಯೋಜಿಸಲು ವ್ಯವಸ್ಥೆ ಮಾಡ ಲಾಗಿದೆ.ಎಲ್ಲ ಏಳು ತಾಲ್ಲೂಕುಗಳಿಗೂ ತೆರಳಿದ ಬಳಿಕ ವಿಶ್ವ ಕನ್ನಡ ಸಮ್ಮೇಳನ ನಡೆವ ಬೆಳಗಾವಿಗೆ ತೆರಳಲು ಮಾ. 9ರಂದು ಕೆ.ಆರ್.ಪೇಟೆ ತಾಲ್ಲೂಕು ಕಿಕ್ಕೇರಿ ಕೆ.ಎಸ್. ನರಸಿಂಹಸ್ವಾಮಿ ಭವನದ ಆವರಣದಲ್ಲಿ ಬೀಳ್ಕೊಡುವ ಸಮಾರಂಭ ನಡೆಯಲಿದೆ.

ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್ ರಾಜೇಂದ್ರ ಪ್ರಸಾದ್, ತಾಪಂ ಅಧ್ಯಕ್ಷ ಭದ್ರಾಚಲ ಮೂರ್ತಿ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್‌ಗೌಡ, ನಗರಸಭೆ ಆಯುಕ್ತ ರಾಮಸ್ವಾಮಿ, ಉಪಾಧ್ಯಕ್ಷ ಚಿಕ್ಕಣ್ಣ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.