ಮಳವಳ್ಳಿ: ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಪಟ್ಟಣದ ಹೊರವಲಯ ದಲ್ಲಿರುವ ಮಾರೇಹಳ್ಳಿ ಬೀರೇಶ್ವರ ಸ್ವಾಮಿ ಜಾತ್ರೆಯು ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಸೋಮವಾರ ಸಂಜೆ ಕನಕಪುರ ತಾಲ್ಲೂಕು ಮೇಕೆದಾಟು ಸಂಗಮ ಬಳಿಯಿರುವ ಮಡಿವಾಳದಿಂದ ದೇವ ರನ್ನು ತಂದು ಇಲ್ಲಿ ಇಡಲಾಗುತ್ತದೆ. ಜತೆಗೆ ಚಂದಹಳ್ಳಿ, ಮಲೆಯೂರು, ತಲಕಾಡು, ಅಗಸನಪುರಕ್ಕೆ ಸೇರಿದ 24 ದೇವರುಗಳನ್ನು ಇಲ್ಲಿ ಶ್ರದ್ಧಾಭಕ್ತಿ ಯಿಂದ ಪೂಜಿಸಲಾಗುತ್ತದೆ.
ಇದಕ್ಕಾಗಿ ಸೋಮವಾರ ಮಧ್ಯಾಹ್ನದಿಂದಲೇ ಕಮಾನು ಕಟ್ಟಿದ ನೂರಾರು ಎತ್ತಿನಗಾಡಿಗಳು ಸೇರಿದಂತೆ ವಾಹನಗಳ ಮೂಲಕ ಜನರು ಬಂದು ಟೆಂಟ್ ಹಾಕಿದ್ದಾರೆ. ದೇವರ ದರ್ಶನಕ್ಕೆ ಮಂಗಳವಾರ ಬೆಳಿಗ್ಗೆಯಿಂದ ಸರದಿಯಲ್ಲಿ ಭಕ್ತರು ನಿಂತಿದ್ದರು. ನಂತರ ಅನ್ನಸಂತರ್ಪಣೆ ನಡೆಯಿತು.
ಈ ದೇವಾಲಯವು ರಾಷ್ಟ್ರೀಯ ಹೆದ್ದಾರಿ 209 ರಿಂದ ಒಂದು ಕಿ.ಮೀ. ದೂರದಲ್ಲಿದ್ದು ಮುಖ್ಯರಸ್ತೆಯಿಂದ ದೇವಾಲಯದವರೆಗೂ ಅಪಾರ ಸಂಖ್ಯೆಯಲ್ಲಿ ಭಕ್ತರು ಇದ್ದದ್ದು ವಿಶೇಷವಾಗಿತ್ತು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ ಡಾ.ಕೆನ್ನದಾನಿ, ಆದರ್ಶ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ.ಮೂರ್ತಿ ಇತರ ಗಣ್ಯರು ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.