ADVERTISEMENT

ಸಕಾಲದಲ್ಲಿ ಸಾಲ ಹಿಂತಿರುಗಿಸಿ: ಯೋಗೀಶ್‌

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 6:55 IST
Last Updated 1 ಜನವರಿ 2014, 6:55 IST

ನಾಗಮಂಗಲ: ಸಾಲವನ್ನು ಒಳ್ಳೆಯ ಉತ್ಪಾದಕ ಉದ್ದೇಶಗಳಿಗೆ ವಿನಿಯೋಗಿ­ಸುವ ಮೂಲಕ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಎ. ಯೋಗೀಶ್ ನುಡಿದರು.

ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ಹೊನ್ನಾವರ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರಚಿಸಲಾದ ಪ್ರಗತಿಬಂಧು- ಸ್ವ-ಸಹಾಯ ಸಂಘಗಳಿಗೆ ಪ್ರಗತಿನಿಧಿ ಸಾಲದ ಚೆಕ್ ವಿತರಿಸಿ ಈಚೆಗೆ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್.ಸಿ. ಶಂಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೊನ್ನಾವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ನಾಗಮಂಗಲ ತಾಲ್ಲೂಕು ಯೋಜನಾಧಿಕಾರಿ ಹೇಮಲತಾ ಇದ್ದರು.

‘ಎನ್‌ಎಸ್‌ಎಸ್‌ ಶಿಬಿರಕ್ಕೆ ಚಾಲನೆ’
ಮಳವಳ್ಳಿ: ವಿದ್ಯಾರ್ಥಿ ಜೀವನದಲ್ಲಿ ಎನ್‌ಎಸ್‌ಎಸ್‌ ಚಟುವಟಿಕೆಗಳು ಮಹತ್ವ ಪಡೆದಿವೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿ ಶಿಬಿರದಲ್ಲಿ ಭಾಗವಹಿಸಬೇಕೆಂದು ಪಟೇಲ್ ಚಿಕ್ಕಸ್ವಾಮಿ ಸಲಹೆ ನೀಡಿದರು.

ತಾಲ್ಲೂಕಿನ ಸಾಹಳ್ಳಿ ಗ್ರಾಮದಲ್ಲಿ ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ, ಮಳವಳ್ಳಿಯ ರಾಷ್ಟ್ರೀಯ ಸೇವಾ ಯೋಜನೆ ಸರ್ಕಾರಿ ಪದವಿ ಕಾಲೇಜು ವತಿಯಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಕ್ಕೆ ಈಚೆಗೆ ಚಾಲನೆ ಅವರು ಮಾತನಾಡಿದರು. ವಿದ್ಯಾರ್ಥಿಗಳು ಶಿಸ್ತು-, ಸಂಯಮವನ್ನು ತಮ್ಮ ಜೀವನ­ದಲ್ಲಿ ಅಳವಡಿಸಿಕೊಳ್ಳಬೇಕಾದರೆ ಇಂತಹ ಶಿಬಿರದಲ್ಲಿ ಭಾಗವಹಿಸಬೇಕು ಎಂದರು.

ಮಳವಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಂ. ರಾಚಯ್ಯ ಅದ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್, ಉಪನ್ಯಾಸಕರಾದ ಪ್ರಿಯಶಂಕರ್, ಶಂಕರಮೂರ್ತಿ, ಕಾಳರಸಯ್ಯ, ರಮೇಶ್, ಸಮಾಜ ಸೇವಕ ಸಿದ್ದಾರ್ಥ, ಶಿಬಿರಾಧಿಕಾರಿ ಹೇಮಚಂದ್ರ ಇತರರು ಇದ್ದರು.

ಸಮಾಲೋಚನಾ ತರಗತಿ
ಮಳವಳ್ಳಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2013–14ನೇ ಸಾಲಿನಲ್ಲಿ ಬಿ.ಎ. ತರಗತಿ ಪ್ರವೇಶ ಪಡೆದು, ಪಟ್ಟಣದ ಶಾಂತಿ ಕಾಲೇಜನ್ನು ಅಧ್ಯಯನ ಕೇಂದ್ರವನ್ನಾಗಿ ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿ­ಗಳಿಗೆ ಜ. 5ರಿಂದ ವಾರಾಂತ್ಯ ಸಮಾಲೋಚನಾ ತರಗತಿ ಪ್ರಾರಂಭವಾಗಲಿವೆ.

ವಿದ್ಯಾರ್ಥಿಗಳು ಅಧ್ಯಯನ ಕೇಂದ್ರದಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಸಂಯೋಜನಾಧಿಕಾರಿ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗೆ ಮೊ: 94803 14307, 97411 23160 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.