ADVERTISEMENT

ಸವಲತ್ತು ಬಳಸಿ ಸ್ವಾವಲಂಬಿಗಳಾಗಲು ರೈತರಿಗೆ ಕರೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 10:20 IST
Last Updated 2 ಜನವರಿ 2012, 10:20 IST

ನಾಗಮಂಗಲ: ಸರ್ಕಾರದ ಸವಲತ್ತು ಸಮರ್ಪಕವಾಗಿ ಬಳಸಿಕೊಳ್ಳುವುದರಿಂದ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು ಎಂದು ಕರಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನೋದ ಚಂದ್ರಶೇಖರ್ ಅಭಿಪ್ರಾಯ ಪಟ್ಟರು.

 ಕರಡಹಳ್ಳಿಯಲ್ಲಿ ಈಚೆಗೆ ನಡೆದ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು. ಹಿಂದೆ ಸರ್ಕಾರದ ಸವಲತ್ತುಗಳು ಉಳ್ಳವರ ಪಾಲಾಗುತ್ತಿದ್ದವು. ಈ ಲೋಪವನ್ನರಿತ ರಾಜ್ಯ ಮತ್ತು ಕೇಂದ್ರ ಸರ್ಕಾರ ಸವಲತ್ತುಗಳನ್ನು ನಿಜವಾದ ಫಲಾನುಭವಿಗಳಿಗೆ ತಲುಪಿಸುವ ದೃಷ್ಟಿಯಿಂದ ಗ್ರಾಮಸಭೆಗಳಲ್ಲಿ ಫಲಾನುಭವಿಗಳು ಹಾಜರಿದ್ದು ಪಡೆಯಲು ಆದೇಶಿಸಿದೆ. ಇದರಿಂದ ಬಡ ರೈತರಿಗೆ ಅನುಕೂಲವಾಗಿದೆ. ಅರ್ಜಿ ಸಲ್ಲಿಸಿದ ಎ್ಲ್ಲಲ ಫಲಾನುಭವಿಗಳಿಗೂ ಆದ್ಯತೆ ಮೇರೆಗೆ ಸವಲತ್ತು ನೀಡಲಾಗುವುದು ಎಂದು ತಿಳಿಸಿದರು.

ಡಿ.26 ಮತ್ತು 27 ರಂದು ಗ್ರಾಮ ಪಂಚಾಯಿತಿ ವಾರ್ಡ್ ಸಭೆಗಳಲ್ಲಿ ವಿವಿಧ ಸವಲತ್ತು ಕೋರಿ ಬಂದಿದ್ದ ಅರ್ಜಿಗಳನ್ನು ಪರಿಶೀಲಿಸಲಾಯಿತು. ಆಶ್ರಯ ಮನೆಗಳನ್ನು ಕೋರಿ ಬಂದಿದ್ದ 180ಕ್ಕೂ ಹೆಚ್ಚು ಅರ್ಜಿಗಳನ್ನು ಸಭೆಯಲ್ಲಿ ಓದಿ ತಿಳಿಸಲಾಯಿತು. ಆದ್ಯತೆ ಮೇರೆಗೆ ಮನೆ ವಿತರಣೆಗೆ ಸಭೆ ತೀರ್ಮಾನಿಸಿತು. ವಿವಿಧ ಇಲಾಖೆಗಳಿಂದ ಸವಲತ್ತು ಕೋರಿ 350ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಸಭೆಯಲ್ಲಿ ಎಲ್ಲ ಅರ್ಜಿಗಳನ್ನು ಪರಿಶೀಲಿಸಲಾಯಿತು. ಗ್ರಾಮಸಭೆಯ ಸಂಪೂರ್ಣ ನಡಾವಳಿಗಳ ವಿಡಿಯೋ ಚಿತ್ರೀಕರಣ ಮಾಡಲಾಯಿತು.

ಸಭೆಯನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸಾಕಮ್ಮ ಉದ್ಘಾಟಿಸಿದರು. ಪಶು ಸಂಗೋಪನಾ ಇಲಾಖೆಸಹಾಯಕ ನಿರ್ದೇಶಕ ಪರಮೇಶ್ವರ್, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಮಕೃಷ್ಣಪ್ಪ, ಸಾಮಾಜಿಕ ಅರಣ್ಯಾಧಿಕಾರಿ ಮುಷ್ತಾಕ್ ಅಹ್ಮದ್, ಕೃಷಿ ಅಧಿಕಾರಿ ಮಂಜುನಾಥ್, ರೇಷ್ಮೆ ಇಲಾಖೆಯ ರಾಜಶೇಖರ್ ಆರಾಧ್ಯ, ಶಿಕ್ಷಣ ಇಲಾಖೆ ಅಧಿಕಾರಿ ಶ್ರೀನಿವಾಸಾಚಾರ್ ತಮ್ಮ ಇಲಾಖೆಗಳಲ್ಲಿ ದೊರೆಯುವ ವಿವಿಧ ಸವಲತ್ತುಗಳ ಬಗೆಗೆ ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಸಿಂಗಾರಿಗೌಡ, ಮಾಯಣ್ಣ, ಬಾಲಾಜಿ, ಸೀನೇಗೌಡ, ನಾಗರಾಜು, ರಾಜು, ಪುಟ್ಟಮಣಿ, ವರದಾಚಾರ್, ಸಾಕಮ್ಮ, ಮಹದೇವಮ್ಮ, ಕುಮಾರ್ ಹಾಗು ಗ್ರಾಮದ ಮುಖಂಡರಾದ ಕೆ.ಎಸ್.ಆನಂದ್, ಕೆ.ಎಂ.ರಾಮಚಂದ್ರಪ್ಪ, ಗೋಪಾಲಕೃಷ್ಣ, ವಿವಿಧ ಸ್ತ್ರೀ ಶಕ್ತಿ ಸಂಘಗಳ ಸದಸ್ಯೆಯರು ಉಪಸ್ಥಿತರಿದ್ದರು. ಕರಡಹಳ್ಳಿ ಸೀತಾರಾಮು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.

ಅಧಿಕಾರಿಗಳ ಗೈರು: ಕರಡಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮಸಭೆಗೆ ತಾಲ್ಲೂಕು ಪಂಚಾಯಿತಿಯ ಅಧಿಕಾರಿಗಳು ಗೈರು ಹಾಜರಾಗಿದ್ದರು.

ದೂರವಾಣಿ ಮೂಲಕ ಸಂಪರ್ಕಿಸಿ ಸಭೆಗೆ ಆಹ್ವಾನ ನೀಡಿದರು. ತಾಲ್ಲೂಕು ಪಂಚಾಯಿತಿಯ ಯೋಜನಾಧಿಕಾರಿ ತಮ್ಮಣ್ಣೇಗೌಡ ವಾಹನ ಸೌಕರ್ಯವಿಲ್ಲ ವಾಹನ ಕಳುಹಿಸಿಕೊಟ್ಟರೆ ಬರುವುದಾಗಿ ತಿಳಿಸಿದ
ತಮ್ಮ ಬೇಜವಾಬ್ದಾರಿ ಮೆರೆದರು. ಸೆಸ್ಕ್, ಆರೋಗ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಹೇಮಾವತಿ ಇಲಾಖೆ, ವಲಯ ಅರಣ್ಯ ಇಲಾಖೆ, ಅಧಿಕಾರಿಗಳು ಸಭೆಗೆ ಬಾರದೇ ಸಾರ್ವಜನಿಕರ ಶಾಪಕ್ಕೆ ಗುರಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.