ADVERTISEMENT

ಸಾಮಾಜಿಕ ಕ್ರಾಂತಿಗೆ ಮಾಜಿ ಸ್ಪೀಕರ್ ಕೃಷ್ಣ ಕರೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 8:20 IST
Last Updated 22 ಫೆಬ್ರುವರಿ 2011, 8:20 IST

ಕೃಷ್ಣರಾಜಪೇಟೆ: ಸಾಮಾಜಿಕ ಅನಿಷ್ಟಗಳನ್ನು ತೊಲಗಿಸಿ, ದೇಶವನ್ನು ಸದೃಢವಾಗಿ ನಿರ್ಮಿಸಲು ಯುವ ಜನರು  ಪಣತೊಡಬೇಕು ಎಂದು ಮಾಜಿ ಸ್ಪೀಕರ್ ಕೃಷ್ಣ ತಿಳಿಸಿದರು.
ಪಟ್ಟಣದ ಕಲ್ಪತರು ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ತಾಲ್ಲೂಕಿನ ಹೊಡಕೆಶೆಟ್ಟ  ಹಳ್ಳಿಯಲ್ಲಿ ನಡೆದ ವಿಶೇಷ ಶ್ರಮದಾನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸೋಮವಾರ ಮಾತನಾಡಿದರು.

ಸಮಾಜದಲ್ಲಿ ಅನೇಕ ಅಸಮಾನತೆಗಳು ತಾಂಡವ ವಾಡುತ್ತಿದ್ದು, ಇದರಿಂದಾಗಿ ದೇಶವು ಹಲವಾರು ಸಂಕಷ್ಟಗಳನ್ನು  ಎದುರಿಸಬೇಕಾಗಿದೆ. ಇದನ್ನು ಯುವಜನರು ಅರಿತು ಕೊಂಡು ಸಾಮಾಜಿಕ ಕ್ರಾಂತಿಗೆ ಮುಂದಾಗಬೇಕು ಎಂದರು.ಸಮಾರೋಪ ಭಾಷಣ ಮಾಡಿದ ಮಾಜಿ ಶಾಸಕ ಬಿ.ಪ್ರಕಾಶ್, ಯುವಜನರು ನಾಯಕತ್ವದ ಗುಣಗಳನ್ನು  ಮೈಗೂಡಿಸಿ ಕೊಳ್ಳಬೇಕು. ಪರೋಪಕಾರ, ಸಹಕಾರದ ಚಿಂತನೆ ಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಮನ್‌ಮುಲ್ ಅಧ್ಯಕ್ಷ ಎಂ.ಬಿ. ಹರೀಶ್, ಜಿ.ಪಂ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್, ಮಾಜಿ ಸದಸ್ಯ ಅಘಲಯ  ಮಂಜು ನಾಥ್, ತಾ.ಪಂ ಸದಸ್ಯ ಸೋಮ ಶೇಖರ್, ಮುಖಂಡ ರಾದ ಕೆ.ಆರ್. ನೀಲಕಂಠ, ಹಾದ ನೂರು ಪರಮೇಶ್ ಶಿಬಿರಾಧಿಕಾರಿ ಆರ್.ಎಸ್.ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.