ನಾಗಮಂಗಲ: ವಿದ್ಯಾರ್ಥಿಗಳನ್ನು ವೃತ್ತಿ ಶಿಕ್ಷಣಕ್ಕೆ ಸಜ್ಜುಗೊಳಿಸಲು ನಾಗಮಂಗಲ ತಾಲ್ಲೂಕು ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯ ಉಚಿತ ಸಿಇಟಿ ತರಬೇತಿ ಶಿಬಿರ ಏರ್ಪಡಿಸಿದ್ದು, ಇದರ ನೆರವು ಪಡೆಯಬೇಕು ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎನ್.ಎಸ್. ರಾಮೇಗೌಡ ಸಲಹೆ ಮಾಡಿದರು.
ಬಿಜಿಎಸ್ ಉಚಿತ ಸಿ.ಇ.ಟಿ. ತರ ಬೇತಿ ಶಿಬಿರವನ್ನು ಶನಿವಾರ ಉದ್ಘಾಟಿ ಸಿದ ಅವರು, ಬದಲಾಗುತ್ತಿರುವ ಶಿಕ್ಷಣದ ಸವಾಲಿಗೆ ಅನುಗುಣವಾಗಿ ವಿದ್ಯಾರ್ಥಿಗಳು ಸಿದ್ಧತೆ ನಡೆಸಬೇಕಾದ ಕ್ರಮವನ್ನು ವಿವರಿಸಿದರು.
ಬಿಜಿಎಸ್ ಶಿಕ್ಷಣ ಮಹಾವಿದ್ಯಾ ಲಯ ಪ್ರಾಚಾರ್ಯ ಡಾ. ಎ.ಟಿ. ಶಿವರಾಮು ಅವರು, ಪ್ರಾಸ್ತಾವಿಕ ನುಡಿಯಲ್ಲಿ ಸಿ.ಇ.ಟಿ. ಉಚಿತ ತರಬೇತಿ ಶಿಬಿರದ ಉದ್ದೇಶಗಳನ್ನು ವಿವರಿಸಿದರು.
ಮುಖ್ಯ ಅತಿಥಿ, ಬಿಜಿಎಸ್ ಔಷಧ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರಮೇಶ್, ವಿದ್ಯಾರ್ಥಿಗಳಿಗೆ ತರಬೇತಿ ಕೇವಲ ಪ್ರವೇಶ ಪರೀಕ್ಷೆಯ ಉದ್ದೇಶವನ್ನಷ್ಟೇ ಹೊಂದಿಲ್ಲ. ಭವಿಷ್ಯದಲ್ಲಿ ಉನ್ನತ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನ ಪಡೆಯಲು ಸಹಕಾರಿಯಾಗಲಿದೆ ಎಂದರು.
ಮುಖ್ಯ ಅತಿಥಿ ಬಿಜಿಎಸ್ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ ವಿಭಾಗದ ಮುಖ್ಯಸ್ಥ ಆನಂದರಾಜು, ವಿದ್ಯಾರ್ಥಿಗಳಿಗೆ ಸಮಯ ಪ್ರಜ್ಞೆ, ಶಿಸ್ತಿನ ಅಗತ್ಯತೆ, ಮಹತ್ವವನ್ನು ವಿವರಿಸಿದರು.
ನಾಗಮಂಗಲ, ಕೆ.ಆರ್. ಪೇಟೆ, ಪಾಂಡವಪುರ, ಕುಣಿಗಲ್, ಬಿ.ಜಿ.ನಗರ ಇಲ್ಲಿಯ ಬಿ.ಜಿ.ಎಸ್. ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು ಹಾಜರಿದ್ದರು. ಕುಣಿಗಲ್‌ನ ರಾಜಣ್ಣ ನಿರೂಪಿಸಿದರು. ಕೆ.ಆರ್. ಪೇಟೆಯ ಸಿ.ಎಂ.ರಘು ವಂದಿಸಿದರು. ಲಕ್ಷ್ಮಿನಾರಾಯಣನಾಥ ಸ್ವಾಮೀಜಿ ಅವರು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.