ADVERTISEMENT

‘ಒಡೆಯರ್‌ ಪುಣ್ಯತಿಥಿಗೆ ಇತಿಹಾಸ ಪರಿಚಯ’

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 5:37 IST
Last Updated 12 ಡಿಸೆಂಬರ್ 2013, 5:37 IST

ಶ್ರೀರಂಗಪಟ್ಟಣ:  ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ಪುಣ್ಯ ತಿಥಿಯಂದು ಪಟ್ಟಣದಲ್ಲಿ ಇತಿಹಾಸ ತಜ್ಞರು, ಪಟ್ಟಣದ ಹಿರಿಯ ನಾಗರಿಕರನ್ನು ಆಹ್ವಾನಿಸಿ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸ್ಥಳೀಯರಿಗೆ ಮೈಸೂರು ಅರಸರ ಇತಿಹಾಸ ಪರಿಚಯಿಲಾಗುವುದು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ಇಲ್ಲಿನ ಮಿನಿ ವಿಧಾನಸೌಧ ಆವರಣದಲ್ಲಿ ಮಂಗಳವಾರ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಒಡೆಯರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ಒಡೆಯರ್‌ ಅಗಲಿಕೆಯಿಂದ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ನಷ್ಟವಾಗಿದೆ. ಕನ್ನಡ ನಾಡಿನ ರಾಜ ಪರಂಪರೆ ಅಂತ್ಯವಾಗಿದೆ. ಒಡೆಯರ್‌ ವಂಶದ ದೊರೆಗಳ ಆಡಳಿತ ಮತ್ತು ಅವರ ಅನನ್ಯ ಕೊಡುಗೆಯನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡುವ ಅಗತ್ಯವಿದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಚ್‌.ಅಧ್ಯಕ್ಷ ಮಹದೇವಸ್ವಾಮಿ, ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ಅಮರನಾಥ್‌, ತಹಶೀಲ್ದಾರ್‌ ಬಿ.ಸಿ.ಶಿವಾನಂದಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ಹೊನ್ನರಾಜು, ಪೊಲೀಸ್‌ ಇನ್‌ಸ್ಪೆಕ್ಟರ್‌ ಜಯಕುಮಾರ್‌, ಕಂದಾಯ ನಿರೀಕ್ಷಕ ಶಿವರಾಜು, ಪೈ.ಬಲರಾಂ, ಪೈ.ಪ್ರಕಾಶ್‌ ಇತರರು ಇದ್ದರು. ತಾಲ್ಲೂಕಿನ ಬೆಳಗೊಳ, ಪಾಲಹಳ್ಳಿ, ಬಾಬುರಾಯನಕೊಪ್ಪಲು ಇತರೆಡೆ ಕೂಡ ಒಡೆಯರ್‌ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.