ADVERTISEMENT

‘ಬದುಕು ವಿಸ್ತರಿಸಿಕೊಳ್ಳುತ್ತಾ ಸಾಗಬೇಕು’

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 6:38 IST
Last Updated 17 ಮಾರ್ಚ್ 2014, 6:38 IST

ಮಂಡ್ಯ: ‘ನನ್ನ ಗ್ರಾಮ ವೆಂಕಟಾಲವೂ ಸೇರಿದಂತೆ ಗ್ರಾಮೀಣ ಪ್ರದೇಶದ ಸ್ವಚ್ಛಂದ ಪರಿಸರದ ಕುರುಹು ನೆನಪಿಸಲೆಂದೇ ‘ರಾಯಲ್‌ ಎನ್‌ಫೀಲ್ಡ್‌’ ಕಾದಂಬರಿ ಬರೆದಿದ್ದೇನೆ’ ಎಂದು ಲೇಖಕ ವಿ.ಎಂ. ಮಂಜುನಾಥ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಭಾನುವಾರ ಭಾರತೀಯ ಕಲಾಕೇದ್ರ ಏರ್ಪಡಿಸಿದ್ದ ‘ರಾಯಲ್‌ ಎನ್‌ಫೀಲ್ಡ್‌’ ಸಂವಾದದಲ್ಲಿ ಮಾತನಾಡಿದರು.
ನಮ್ಮ ಮನೆ ಮುಂದೆ ಸಾವಿರಾರು ಮಿಲಿಟರಿ ಸೈನಿಕರಿಗೆ ಹಿರಿಯ ಮಿಲಟರಿ ಅಧಿಕಾರಿಗಳು ಎನ್‌ಫೀಲ್ಡ್‌ ಬೈಕ್‌ ತರಬೆೇತಿ ನೀಡುತ್ತಿದ್ದನ್ನು ನೋಡಿ, ಪ್ರೇರೇಪಿತನಾಗಿ ಕಾದಂಬರಿಗೆ ಆ ಹೆಸರನ್ನು ಇಟ್ಟಿದ್ದೇನೆ ಎಂದರು.

ಕಲಾಕೃತಿ ಎಂಬುದು ಜಗತ್ತನ್ನು ಮೀರಿ ನಿಂತಿರುತ್ತದೆ. ಕಾದಂಬರಿಯಲ್ಲಿ ನೋಡಿದ ಸತ್ಯ ಘಟನೆಗಳ ಅನಾವರಣ ಮಾಡಿದ್ದೇನೆ ಎಂದು ತಿಳಿಸಿದರು. ಬದುಕು ಚಿಕ್ಕದಾಗಿ ಇರೋದಿಲ್ಲ. ಎಲ್ಲರ ಬದುಕಿಗೂ ಅದರದೇ ಆಕಾರವಿದೆ. ಅದನ್ನು ವಿಸ್ತರಿಸಿ ಕೊಳ್ಳುತ್ತಾ ಸಾಗಬೇಕಿದೆ ಎಂದು ಹೇಳಿದರು. ವಿಕಸನ ಸಂಸ್ಥೆ ನಿರ್ದೇೇಶಕ ಮಹೇಶ್‌ಚಂದ್ರ ಗುರು, ವಿನಯಕುಮಾರ್‌, ಮಂಗಲ ಅನಿತಾ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.