ADVERTISEMENT

ವೃದ್ಧ ಸಾವು: 126 ಮಂದಿಗೆ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 14:41 IST
Last Updated 22 ಸೆಪ್ಟೆಂಬರ್ 2020, 14:41 IST
   

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ 74 ವರ್ಷದ ವೃದ್ಧರೊಬ್ಬರು ಕೋವಿಡ್‌–19ನಿಂದ ಮಂಗಳವಾರ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 96ಕ್ಕೆ ಹೆಚ್ಚಾಗಿದೆ.

ಹೊಸದಾಗಿ 126 ಮಂದಿಗೆ ಕೋವಿಡ್‌ ದೃಢಪಟ್ಟಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,389ಕ್ಕೆ ಏರಿಕೆಯಾಗಿದೆ. ಕೆ.ಆರ್‌.ಪೇಟೆ ತಾಲ್ಲೂಕಿನ 44, ಮಂಡ್ಯ 27, ಪಾಂಡವಪುರ 21, ಶ್ರೀರಂಗಪಟ್ಟಣ 13, ನಾಗಮಂಗಲ 11, ಮಳವಳ್ಳಿ 9, ಮದ್ದೂರು ತಾಲ್ಲೂಕಿನ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಕೋವಿಡ್‌ನಿಂದ ಗುಣಮುಖರಾದ 54 ಮಂದಿಯನ್ನು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಯಿತು. ಮಂಡ್ಯ ತಾಲ್ಲೂಕಿನ 29, ಶ್ರೀರಂಗಪಟ್ಟಣ 11, ಮದ್ದೂರು ತಾಲ್ಲೂಕಿನ 9 ಮಂದಿ ಮನೆಗೆ ತೆರಳಿದರು. ಒಟ್ಟು ಸೋಂಕಿತರಲ್ಲಿ ಇಲ್ಲಿಯವರೆಗೆ 7,863 ಮಂದಿ ಗುಣಮುಖರಾಗಿದ್ದಾರೆ. 1,430 ಪ್ರಕರಣಗಳು ಸಕ್ರಿಯವಾಗಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ 557, ಕೋವಿಡ್‌ ಕೇರ್‌ ಕೇಂದ್ರಗಳ್ಲಲಿ 183, ಖಾಸಗಿ ಆಸ್ಪತ್ರೆಗಳಲ್ಲಿ 89, ಮನೆಯಲ್ಲಿ 601 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.