ಮಂಡ್ಯ: ಮಳವಳ್ಳಿ ಮತ್ತು ಮದ್ದೂರು ತಾಲ್ಲೂಕಿನಲ್ಲಿ ನಡೆದ ಎರಡು ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 11 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಆ.6ರಂದು ಮಳವಳ್ಳಿ ಪಟ್ಟಣದ ಮಾಗನೂರು ಸಮೀಪದ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಯೋಗೇಶ್ ಎಂಬಾತನನ್ನು ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಮಳವಳ್ಳಿ ವಡ್ಡರ ಕಾಲೊನಿಯ ಮನೋಜ್ ಪಟೇಲ್, ಎನ್‌ಇಎಸ್ ಬಡಾವಣೆಯ ನಂದನ್ ಜೆ., ಜಿ.ಆರ್.ಗಿರೀಶ್ (ಡಾಲಿ ಗುರು), ಎನ್.ಪ್ರೀತಮ್ ಬಂದಿತರು.
ಮದ್ದೂರು ಪ್ರಕರಣ:
ಮದ್ದೂರು ತಾಲ್ಲೂಕು ಕೆಸ್ತೂರು ಬಳಿಯ ಸ್ಕಂದ ಬಡಾವಣೆ ಬಳಿ ವಡ್ಡರದೊಡ್ಡಿ ಗ್ರಾಮದ ಪಿ.ಎನ್. ಅರುಣ್ ಎಂಬಾತನನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿಗಳಾದ ನಿಡಘಟ್ಟ ಗ್ರಾಮದ ಎನ್.ಎಸ್. ವಿಕಾಸ್, ಹನುಮಂತಪುರದ ಎಚ್.ಆರ್. ಭರತ್‌ಗೌಡ, ಹನುಮಂತಪುರದ ಎಚ್.ಪಿ. ಹೇಮಂತ್ , ಯರಗನಹಳ್ಳಿಯ ವೈ.ಕೆ. ಚಂದನ್, ಹೆಮ್ಮನಹಳ್ಳಿಯ ಎಚ್.ಎಸ್. ಕುಮಾರ, ಹನುಮಂತಪುರದ ಎಚ್.ಆರ್. ನಿತ್ಯಾನಂದ ಹಾಗೂ ಹೆಮ್ಮನಹಳ್ಳಿಯ ಎಚ್.ಎಸ್. ಶ್ರೀನಿವಾಸ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಎರಡೂ ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.