ADVERTISEMENT

ಮಳವಳ್ಳಿ | ಹಣ ದುರುಪಯೋಗ ಆರೋಪ: ಸಹಕಾರ ಸಂಘಕ್ಕೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 13:40 IST
Last Updated 29 ಜುಲೈ 2024, 13:40 IST
ಮಳವಳ್ಳಿ ಪಟ್ಟಣದ ಲಕ್ಷ್ಮಿನರಸಿಂಹ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ವಿರುದ್ಧ ಕೆಲ ನಿರ್ದೇಶಕರು ಹಾಗೂ ಸದಸ್ಯರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಮಳವಳ್ಳಿ ಪಟ್ಟಣದ ಲಕ್ಷ್ಮಿನರಸಿಂಹ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ವಿರುದ್ಧ ಕೆಲ ನಿರ್ದೇಶಕರು ಹಾಗೂ ಸದಸ್ಯರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.   

ಮಳವಳ್ಳಿ: ಪಟ್ಟಣದ ಲಕ್ಷ್ಮಿನರಸಿಂಹ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಪ್ರೇಮ್ ಕುಮಾರಿ ಸಂಘದಲ್ಲಿ ಸಾಕಷ್ಟು ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ಕೆಲ ನಿರ್ದೇಶಕರು ಹಾಗೂ ಸದಸ್ಯರು ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಕೋಟೆ ರಸ್ತೆಯ ಸಹಕಾರ ಸಂಘದ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿದ ನಿರ್ದೇಶಕರು ಹಾಗೂ ಸದಸ್ಯರು ‘ಸಂಘದಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಸಿಇಒ ದುರುಪಯೋಗ ಪಡಿಸಿಕೊಂಡು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಸಂಘದ ವ್ಯಾಪ್ತಿಯಲ್ಲಿ ಇರದ ಕಂಸಾಗರದ ಕೆ.ಟಿ.ಕುಮಾರ್ ಎಂಬುವವರಿಗೆ ₹1.8 ಲಕ್ಷ ಮಂಜೂರು ಮಾಡಲಾಗಿದೆ. 40 ವರ್ಷಗಳ ಹಿಂದೆ ಮೃತಪಟ್ಟಿರುವ ಸದಸ್ಯರ ಹೆಸರಿನಲ್ಲೂ ನಕಲಿ ದಾಖಲಾತಿಗಳಿಗೆ ಸಾಲ ನೀಡಲಾಗಿದೆ. ಹಲವು ಸದಸ್ಯರಿಗೆ ಹೆಚ್ಚುವರಿ ಸಾಲ ಮಂಜೂರು ಮಾಡಿಕೊಂಡು ಚೆಕ್ ಮೂಲಕ ಹಣವನ್ನು ಡ್ರಾ ಮಾಡಿ ಬಳಸಿಕೊಂಡಿದ್ದಾರೆ. ಹೀಗಾಗಿ ಹಣವನ್ನು ಕಾರ್ಯದರ್ಶಿ ಅವರಿಂದ ವಸೂಲಿ ಮಾಡಿ ಸಂಘಕ್ಕೆ ಆಗಿರುವ ನಷ್ಟವನ್ನು ಸರಿಪಡಿಸಬೇಕು’ ಕೆಲ ಸದಸ್ಯರು ಎಂದು ಆಗ್ರಹಿಸಿದರು.

ADVERTISEMENT

ಅಧ್ಯಕ್ಷ ಎಂ.ವಿ.ಮಾಯಣ್ಣ ಮಾತನಾಡಿ, ‘ಸಿಇಒ ಪ್ರೇಮ್ ಕುಮಾರಿ ಅವರು ಹಣ ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಸಾಕಷ್ಟು ದೂರು ಬಂದಿವೆ. ಹಲವು ಬಾರಿ ಪ್ರಶ್ನಿಸಿದ್ದರೂ ಸಮರ್ಪಕ ಉತ್ತರ ನೀಡಿಲ್ಲ. ತಪ್ಪು ಒಪ್ಪಿಕೊಂಡು ಸ್ವಲ್ಪ ಹಣವನ್ನು ಮರು ಪಾವತಿ ಮಾಡಿದ್ದಾರೆ. ಜು.24ರಂದು ಸಭೆ ನಡೆಸಿ ಅವರನ್ನು ಅಮಾನತು ಮಾಡಲಾಗಿತ್ತು. ಆದರೆ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ನಮಗೂ ಗೌರವ ನೀಡುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಇಒ ಪ್ರೇಮ್ ಕುಮಾರಿ ಮಾತನಾಡಿ, ‘ರೈತರಿಂದ ನಾವು ಅವರಿಗೆ ನೀಡಬೇಕಾಗಿದ್ದ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಹೋಗಲಾಗುವುದು’ ಎಂದು ಹೇಳಿದರು.

ಪುರಸಭೆ ಮಾಜಿ ಅಧ್ಯಕ್ಷ ಚಿಕ್ಕರಾಜು ಮಾತನಾಡಿ, ‘ನೂರು ವರ್ಷಗಳ ಇತಿಹಾಸ ಹೊಂದಿರುವ ಸಹಕಾರ ಸಂಘದಲ್ಲಿ ಆಗಿರುವ ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ಹೋಗಲು ಸಲಹೆ ನೀಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.