ADVERTISEMENT

ಅಘಲಯ ಸಂಘ: ಜಾನಕಿರಾಮ್ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2024, 15:31 IST
Last Updated 2 ಫೆಬ್ರುವರಿ 2024, 15:31 IST
ಸಂತೇಬಾಚಹಳ್ಳಿ ಹೋಬಳಿಯ ಅಘಲಯ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ಜಾನಕಿರಾಮು ಹಾಗೂ ಉಪಾಧ್ಯಕ್ಷೆ ಜಯಶೀಲ ಆಯ್ಕೆಯಾದರು
ಸಂತೇಬಾಚಹಳ್ಳಿ ಹೋಬಳಿಯ ಅಘಲಯ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ಜಾನಕಿರಾಮು ಹಾಗೂ ಉಪಾಧ್ಯಕ್ಷೆ ಜಯಶೀಲ ಆಯ್ಕೆಯಾದರು   

ಸಂತೇಬಾಚಹಳ್ಳಿ: ಅಘಲಯ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಎ.ಎನ್ ಜಾನಕೀರಾಂ ಹಾಗೂ ಉಪಾಧ್ಯಕ್ಷರಾಗಿ ಜಯಶೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ  ಶುಕ್ರವಾರ ನಡೆದ ಚುನಾವಣೆಯಲ್ಲಿ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಹಕಾರ ಸಂಘದ ಉಪನಿಬಂಧಕ ಭರತ್ ಕುಮಾರ್ ಘೋಷಿಸಿದರು.

‘ರೈತರಿಗೆ ಅನುಕೂಲವಾಗುವಂತ ಯೋಜನೆಗಳ ಬಗ್ಗೆ ಅರಿವು ಮೂಡಿಸಿ, ರೈತರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ನೆರವಾಗುವಂತಹ ಯೋಜನೆಯನ್ನು ನೀಡುತ್ತೇವೆ’ ಎಂದು ಜಾನಕಿರಾಮು ಭರವಸೆ ನೀಡಿದರು.

ADVERTISEMENT

ಸಂಘದ ನಿರ್ದೇಶಕರಾದ ನವೀನಕುಮಾರ್,ಮಂಜೇಗೌಡ, ಮಹದೇವ್, ರಾಮೇಗೌಡ, ಕೃಷ್ಣೇಗೌಡ, ಅನಿಲಕುಮಾರ್, ಶ್ವೇತಾ, ಯೋಗೇಶ್, ಹಿರಿಯ ಮುಖಂಡ ಧರಣಿ ಶಿವನಜೇಗೌಡ, ಕೆ.ಸಿದ್ದೇಗೌಡ, ಎ.ಎಲ್ ನಂಜಪ್ಪ, ಎ.ಬಿ ಲೋಕೇಶ್, ಎ.ಎನ್ ಯೋಗೇಶ್, ಎ.ಎಸ್.ಕುಮಾರ್, ಮುರುಳೀಧರ್, ಎ.ಎಸ್.ಗಣೇಶ್, ಎ.ಎಸ್.ಶ್ರೀಧರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.