ಕಿಕ್ಕೇರಿ: ಸಮೀಪದ ಕರೋಟಿ ಗ್ರಾಮದಲ್ಲಿ ರೈತರೊಬ್ಬರು ಬೆಳೆದ ತೆಂಗು, ಅಡಿಕೆ ಸಸಿಗಳನ್ನು ಸೋಮವಾರ ಕಿಡಿಗೇಡಿಗಳು ನಾಶಪಡಿಸಿದ್ದಾರೆ.
ರೈತ ನಾಗರಾಜು ಅವರಿಗೆ ಸೇರಿದ ತೋಟ ಇದಾಗಿದ್ದು, 30 ಅಡಿಕೆ, 25 ತೆಂಗಿನ ಗಿಡಗಳನ್ನು ನಾಶವಾಗಿದ್ದು, ರೈತ ನೊಂದು ಕಂಗಲಾಗಿದ್ದಾನೆ. ಇದೇ ರೀತಿ ನಾಲ್ಕೈದು ಬಾರಿ ತೋಟದಲ್ಲಿನ ಗಿಡಗಳನ್ನು ಹಾಳು ಮಾಡಿದ್ದಾರೆ ಎಂದು ರೈತ ಅಲವತ್ತುಕೊಂಡಿದ್ದಾರೆ.
ಕಿಕ್ಕೇರಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.