ADVERTISEMENT

ನಿಷೇಧವಿದ್ದರೂ ಬೇಬಿಬೆಟ್ಟದಲ್ಲಿ ಗಣಿಗಾರಿಕೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 19:12 IST
Last Updated 2 ಫೆಬ್ರುವರಿ 2019, 19:12 IST
ಬೇಬಿಬೆಟ್ಟದಲ್ಲಿ ಹಿಟಾಚಿಯ ಮೂಲಕ ಗಣಿಗಾರಿಕೆ ನಡೆಯುತ್ತಿದೆ
ಬೇಬಿಬೆಟ್ಟದಲ್ಲಿ ಹಿಟಾಚಿಯ ಮೂಲಕ ಗಣಿಗಾರಿಕೆ ನಡೆಯುತ್ತಿದೆ   

ಪಾಂಡವಪುರ: ನಿಷೇಧದ ನಡುವೆಯೂ ತಾಲ್ಲೂಕಿನ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಿರಾತಂಕವಾಗಿ ನಡೆದಿದೆ.

ಬೇಬಿಬೆಟ್ಟದಲ್ಲಿ ಕ್ರಷರ್ ಘಟಕವೊಂದರ ಹಿಂಭಾಗದ ಕ್ವಾರಿಯಲ್ಲಿ ಶನಿವಾರ ಗಣಿಗಾರಿಕೆ ನಡೆಯುತ್ತಿದ್ದು, ಜಿಲ್ಲಾಧಿಕಾರಿ ಆದೇಶವನ್ನು ಉಲ್ಲಂಘಿಸಿ ಗಣಿಮಾಲೀಕರು ಫೆ. 1ರಿಂದಲೇ ಗಣಿಗಾರಿಕೆಗೆ ಆರಂಭಿಸಿದ್ದಾರೆ.

ಗಣಿಗಾರಿಕೆಯಿಂದ ಕೆಆ‌‌ರ್‌ಎಸ್‌ ಅಣೆಕಟ್ಟೆಗೆ ಅಪಾಯವಿದೆ ಎಂದು ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರ ವರದಿ ನೀಡಿತ್ತು. ಈ ವರದಿ ಹಿನ್ನೆಲೆಯಲ್ಲಿ ಬೇಬಿಬೆಟ್ಟ ಸೇರಿದಂತೆ ಕೆಆರ್‌ಎಸ್ ಸುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.