ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದ ದನಗಳ ಜಾತ್ರೆಯಲ್ಲಿ ನಟ ದರ್ಶನ್ ಅವರ ಜೋಡೆತ್ತುಗಳು ಗಮನಸೆಳೆಯುತ್ತಿವೆ.
ಪಾಂಡವಪುರ: ತಾಲ್ಲೂಕಿನ ಬೇಬಿಬೆಟ್ಟದ ಭಾರಿ ದನಗಳ ಜಾತ್ರಾಮಹೋತ್ಸವದಲ್ಲಿ ನಟ ದರ್ಶನ್ ಅವರ ₹ 20 ಲಕ್ಷ ಮೌಲ್ಯದ ಜೋಡಿ ಎತ್ತುಗಳು ರೈತರ ಹಾಗು ಜಾತ್ರೆಗೆ ಬಂದವರ ಗಮನ ಸೆಳೆಯುತ್ತಿವೆ.
ದನಗಳ ಜಾತ್ರಾಮಹೋತ್ಸವದಲ್ಲಿ ಸುಮಾರು 1500ಕ್ಕೂ ಹೆಚ್ಚು ಜೊತೆ ಎತ್ತುಗಳನ್ನು ರೈತರು ಕಟ್ಟಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದಾರೆ. ಈ ಪೈಕಿ ನಟ ದರ್ಶನ್ ಅವರ 6 ಹಲ್ಲಿನ ಜೋಡೆತ್ತುಗಳನ್ನು ನೋಡಲು ರೈತರು ತಂಡೋಪ ತಂಡವಾಗಿ ಬರುತ್ತಿದ್ದಾರೆ.
ಹಿರೀಸಾವೆಯ ಸಂದೀಪ್ ಅವರು ನಟ ದರ್ಶನ್ ಅವರ ಎತ್ತುಗಳನ್ನು ನಿರ್ವಹಣೆ ಮಾಡುತ್ತಾ ಇವುಗಳ ಉಸ್ತುವಾರಿ ವಹಿಸಿದ್ದಾರೆ.
ಕಳೆದ ವರ್ಷ ನಡೆದಿದ್ದ ಬೇಬಿಬೆಟ್ಟದ ದನಗಳ ಜಾತ್ರಾಮಹೋತ್ಸವದ ಉಚಿತ ಸರಳ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿದ್ದ ನಟ ದರ್ಶನ್ ಅವರು, ಮುಂದಿನ ಬಾರಿ ದನಗಳ ಜಾತ್ರಾಮಹೋತ್ಸವದಲ್ಲಿ ನನ್ನದೊಂದು ಜೊತೆ ಎತ್ತುಗಳನ್ನು ಕಟ್ಟಬೇಕು ಎಂದುಕೊಂಡಿದ್ದೇನೆ ಎಂದು ಹೇಳಿದ್ದರು. ಅದರಂತೆ ನಡೆದಿದ್ದಾರೆ.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ನಟ ದರ್ಶನ್ ಅವರ ಜೋಡಿ ಎತ್ತುಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.