
ಭಾರತೀನಗರ: ರೈತ ದೇಶಕ್ಕೆ ಅನ್ನದಾತನಾದರೆ ರೈತನಿಗೆ ಬಸವಣ್ಣ ದೇವರು ಅನ್ನದಾತ. ಅಂತಹ ಬಸವಣ್ಣನನ್ನು ರೈತರಾದಿಯಾಗಿ ಎಲ್ಲರೂ ಮರೆತಿದ್ದಾರೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.
ಸಮೀಪದ ದೊಡ್ಡಅರಸಿನಕೆರೆ ಗೇಟ್ ಬಳಿಯ ಎಸ್‌ವೈಎಸ್ ಸಮುದಾಯ ಭವನದಲ್ಲಿ ದಾರಿದೀಪ ಫೌಂಡೇಷನ್ ವತಿಯಿಂದ ಭಾನುವಾರ ನಡೆದ ಸಂಕ್ರಾಂತಿ ಸಂಭ್ರಮೋತ್ಸವ ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಹಿಂದೆ ಜಮೀನನ್ನು ಉಳುಮೆ ಮಾಡಿ ಜಮೀನನ್ನು ಹದಗೊಳಿಸಿ, ಜೀವನ ನಡೆಸುವಂತೆ ಮಾಡುತ್ತಿದ್ದವನು ಬಸವಣ್ಣ ದೇವರು. ಹಿಂದೆ ನವೆಂಬರ್ ತಿಂಗಳಿನಲ್ಲಿಯೇ ರಾಸುಗಳಿಗೆ ಹಸಿರು ಮೇವನ್ನು ತಿನ್ನಿಸುತ್ತಿದ್ದರು. ಸಂಕ್ರಾಂತಿ ಹಬ್ಬದಲ್ಲಿ ಬಸವಣ್ಣನನ್ನು ಕಿಚ್ಚು ಹಾಯಿಸುತ್ತಿದ್ದುದು ಚಳಿಯ ಕಾರಣದಿಂದ. ಮನೆಯಲ್ಲಿ ಹೆಣ್ಣು ಮಕ್ಕಳು ಎಳ್ಳು ಬೆಲ್ಲ, ಹಂಚುತ್ತಿದ್ದರು. ಇದರಲ್ಲೂ ಕೂಡ ವೈಜ್ಞಾನಿಕ ಕಾರಣವಿದೆ ಎಂದು ಹೇಳಿದರು.
ಸಂಕ್ರಾಂತಿ ಸಮಯಕ್ಕೆ ಸರಿಯಾಗಿ ಬೆಳೆ ಕೊಯ್ಲು ಮಾಡಿ, ಒಕ್ಕಣೆ ಮಾಡಲು ಕಣಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಣಿಗೊಳಿಸುತ್ತಿದ್ದರು. ಅದರೊಳಗೆ ಪಾದರಕ್ಷೆ ಹಾಕಿಕೊಂಡು ಓಡಾಡುತ್ತಿರಲಿಲ್ಲ. ಏಕೆಂದರೆ ಪವಿತ್ರವಾದ ರಾಶಿ ಪೂಜೆ ಮಾಡುತ್ತಿದ್ದರು. ಇಂದಿನ ದಿನ ರಸ್ತೆಯಲ್ಲಿ ಬೆಳೆಗಳನ್ನು ಹಾಕಿ ಒಕ್ಕಣೆ ಮಾಡುತ್ತಿದ್ದು, ಇದು ಅಸುರಕ್ಷಿತ ಕ್ರಮ ಎಂದು ಹೇಳಿದರು.
ಹಿರಿಯರನ್ನು ನೋಡಿಕೊಳ್ಳದ ಕಾಲ ಇದಾಗಿದೆ. ಇಂತಹ ಸಂದರ್ಭದಲ್ಲಿ ದಾರಿ ದೀಪ ಫೌಂಡೇಷನ್ ಮಕ್ಕಳ ಹಾಗೂ ಹಿರಿಯ ನಾಗರಿಕರ ಸೇವಾ ಕೇಂದ್ರ ಸ್ಥಾಪಿಸಿ ಅವರ ಯೋಗಕ್ಷೇಮ ವಿಚಾರಿಸುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.
ಭಜರಂಗಸೇನೆ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ನಿವೃತ್ತ ಪಾಂಶುಪಾಲ ಎಚ್.ಲಿಂಗಯ್ಯ, ಮುಖಂಡರಾದ ಕೆ.ಟಿ.ಸುರೇಶ್, ಅಣ್ಣೂರು ವಿನು, ಕರಡಕೆರೆ ವಸಂತಮ್ಮ, ಡಿ.ಎ.ಕೆರೆ ಎಪಿಸಿಎಸ್ ಅಧ್ಯಕ್ಷ ಮಹೇಶ್, ನಿವೃತ್ತ ಮುಖ್ಯ ಶಿಕ್ಷಕ ಎಂ.ಮಾಯಪ್ಪ, ಫೌಂಡೇಷನ್‌ನ ಅಧ್ಯಕ್ಷ ಎಲ್.ದಯಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪಾಧ್ಯಕ್ಷ ವಿ.ವೈ.ಆನಂದ್, ಕಾರ್ಯದರ್ಶಿ ಎಂ.ನಳಿನಿ, ಜಂಟಿ ಕಾರ್ಯದರ್ಶಿ ಧರ್ಮೇಂದ್ರಸಿಂಗ್, ಖಜಾಂಚಿ ಪ್ರದೀಪ್‌ಕುಮಾರ್, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಸಾಧಕರಿಗೆ ಶಾಸಕರಿಂದ ಸನ್ಮಾನ ಸಮಾರೋಪ
ಸಮಾರಂಭದಲ್ಲಿ ಶಾಸಕ ಉದಯ್ ಅವರು ಮಳವಳ್ಳಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಕ್ಷೇತ್ರದಿಂದ ಮಹೇಶ್‌ಚಂದ್ರಗುರು ಸಾಹಿತ್ಯ ಕ್ಷೇತ್ರದಿಂದ ದೋ.ಚಿ. ಗೌಡ ರಂಗಭೂಮಿ ಕಲಾವಿದರಾದ ಶಂಕರೆಗೌಡ ತೊರೆಚಾಕನಹಳ್ಳಿ ಪಿ.ಎಸ್.ಮಂಜುನಾಥ್ ಕ್ರೀಡಾ ಕ್ಷೇತ್ರದಿಂದ ಪೈ.ಅಬ್ದುಲ್ ರಫೀಕ್ ದೈಹಿಕ ಶಿಕ್ಷಕ ಮಲ್ಲುಸ್ವಾಮಿ ಸಮುದಾಯ ಅಭಿವೃದ್ಧಿ ಕ್ಷೇತ್ರದಿಂದ ಎಂ.ನಂದೀಶ್ ಸಮಾಜ ಸೇವಕರಾದ ಡಾ.ಆರ್.ರಾಘವೇಂದ್ರ ಜೀವಧಾರೆ ನಟರಾಜು ಗಂಜಾಂ ಮಂಜುನಾಥ್ ಸಾಂಸ್ಕೃತಿಕ ಕ್ಷೇತ್ರದಿಂದ ತಲಕಾಡು ಕೃಷ್ಣಮೂರ್ತಿ ಜಾನಪದ ಕ್ಷೇತ್ರದಿಂದ ಸವಿತ ಚಿರು ಕುನ್ನಯ್ಯ ಡಿ.ಎಂ.ಮಹೇಶ್ ಚಲುವರಾಜು ಶಿಕ್ಷಣ ಕ್ಷೇತ್ರದಿಂದ ಪಿ.ವಿ.ಮಹದೇವು ಕಲಾ ಕ್ಷೇತ್ರದಿಂದ ಭರತನಾಟ್ಯ ಕಲಾವಿದೆ ಡಿ.ಎನ್.ಭಾರ್ಗವಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.