ಬೆಳಕವಾಡಿ: ಸಮೀಪದ ಬಿಳಿಜಗಲಿ ಮೊಳೆ ಗ್ರಾಮದ ಶನೇಶ್ವರಸ್ವಾಮಿ ದೇವಸ್ಥಾನದ ಬಳಿ ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆಟೋ ಚಾಲಕನನ್ನು ಬೆಳಕವಾಡಿ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ನಿವಾಸಿ ದಿಲೀಪ್ ಕುಮಾರ್ ಬಂಧಿತ. ತಲಕಾಡು ಕಡೆಯಿಂದ ಬಿಳಿಜಗಲಿ ಮೊಳೆ ಮಾರ್ಗವಾಗಿ ಕಿರುಗಾವಲಿಗೆ ಪ್ಯಾಸೆಂಜರ್ ಆಟೋದಲ್ಲಿ ಸುಮಾರು 40ರಿಂದ 50 ಕೆ.ಜಿ. ತುಂಬಿದ 15 ಬಿಳಿ ಪ್ಲಾಸ್ಟಿಕ್ ಚೀಲದಲ್ಲಿ ಸಾಗಣೆ ಮಾಡುತ್ತಿದ್ದ ವೇಳೆ ತಾಲ್ಲೂಕು ಕಚೇರಿ ಆಹಾರ ನಿರೀಕ್ಷಕ ಬಿ. ಅಶ್ವತ್ಥ್ ಹಾಗೂ ಪೊಲೀಸರು ತಪಾಸಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.
ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.